ಕರ್ನಾಟಕ

ವಿಧಾನಸಭಾ ಚುನಾವಣೆ: ಮಂಡ್ಯ ಜಿಲ್ಲೆಯಲ್ಲಿ ಅಂತಿಮವಾಗಿ 84 ಅಭ್ಯರ್ಥಿಗಳು ಕಣದಲ್ಲಿ

ಮಂಡ್ಯ (ಏ.30): ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳಲ್ಲಿ 29 ಮಂದಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಂಡಿದ್ದು, ಅಂತಿಮವಾಗಿ ಒಟ್ಟು 84 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ.

ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ 4 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಈ ಪೈಕಿ ಚುನಾವಣಾ ಕಣದಲ್ಲಿ 13 ಉಳಿದಿರುವ ಅಭ್ಯರ್ಥಿಗಳಾಗಿದ್ದಾರೆ. ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಹಿಂದೂಸ್ಥಾನ ಜನತಾ ಪಾರ್ಟಿಯಿಂದ ಎಂ.ಪಿ.ಮುನಾವರ್ ಷರಿಫ್, ಪಕ್ಷೇತರ ಅಭ್ಯರ್ಥಿ ಜಾವಿದ್ ಖಾನ್, ರಾಷ್ಟ್ರೀಯ ಮಾನವ್ ವಿಕಾಸ್ ಪಾರ್ಟಿಯಿಂದ ವಿಶ್ವನಾಥ ರಾವ್ ಹಾಗೂ ಪಕ್ಷೇತರ ಅಭ್ಯರ್ಥಿ ಚಿಕ್ಕ ನಂಜಾಚಾರಿ ಅವರು ನಾಮಪತ್ರವನ್ನು ಹಿಂಪಡೆದಿದ್ದಾರೆ.

ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ 2 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಈ ಪೈಕಿ ಚುನಾವಣಾ ಕಣದಲ್ಲಿ 13 ಉಳಿದಿರುವ ಅಭ್ಯರ್ಥಿಗಳಾಗಿದ್ದಾರೆ. ಮಳವಳ್ಳಿ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಅಭ್ಯರ್ಥಿ ನೀಲಮ್ಮ ಹಾಗೂ ಲೋಕ ಆವಾಜ್ ದಳ ಪಕ್ಷದ ಆಭ್ಯರ್ಥಿ ಎಂ.ಕೆ.ವಿದ್ಯಾ ಅವರು ನಾಮಪತ್ರವನ್ನು ಹಿಂಪಡೆದಿದ್ದಾರೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ 5 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಈ ಪೈಕಿ ಚುನಾವಣಾ ಕಣದಲ್ಲಿ 13 ಉಳಿದಿರುವ ಅಭ್ಯರ್ಥಿಗಳಾಗಿದ್ದಾರೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯಿಂದ ಆರ್.ಎಸ್.ಹನುಮಂತೇಗೌಡ, ಪಕ್ಷೇತರ ಅಭ್ಯರ್ಥಿಗಳಾದ ಪಿ.ವಿ.ಸುಂದರಮ್ಮ, ಸಿ.ಸುಬ್ರಮಣ್ಯ, ಜೆ.ಶಿವಲಿಂಗೇಗೌಡ ಹಾಗೂ ಎಂ.ರಮೇಶ್ ಅವರು ನಾಮಪತ್ರಗಳನ್ನು ಹಿಂಪಡೆದಿದ್ದಾರೆ.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ 6 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಈ ಪೈಕಿ ಚುನಾವಣಾ ಕಣದಲ್ಲಿ 11 ಉಳಿದಿರುವ ಅಭ್ಯರ್ಥಿಗಳಾಗಿದ್ದಾರೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ರಾಷ್ಟ್ರೀಯ ಮಾನವ ವಿಕಾಸ ಪಕ್ಷದಿಂದ ಎಸ್.ವೆಂಕಟೇಶ್, ಪಕ್ಷೇತರ ಅಭ್ಯರ್ಥಿಗಳಾದ ಸಿದ್ದಯ್ಯ, ಚಿದಂಬರ ಎಂ.ಸಿ. ಕೆ.ಉದಯ್‍ಕುಮಾರ್ ಸಿ.ಹೇಮಂತ್‍ಕುಮಾರ್ ಹಾಗೂ ಪಿ.ಹೆಚ್.ಚಂದ್ರಶೇಖರ್ ಅವರುಗಳು ನಾಮಪತ್ರ ಹಿಂಪಡೆದಿದ್ದಾರೆ.

ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ 3 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಈ ಪೈಕಿ ಚುನಾವಣಾ ಕಣದಲ್ಲಿ 10 ಉಳಿದಿರುವ ಅಭ್ಯರ್ಥಿಗಳಾಗಿದ್ದಾರೆ. ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾದ ಡಿ.ಆರ್.ಮಂಜುನಾಥ, ಎಲ್.ಜಯರಾಮೇಗೌಡ ಹಾಗೂ ಬಿ.ಕೆ.ಗಂಗಾಧರ್ ಅವರು ನಾಮಪತ್ರವನ್ನು ಹಿಂಪಡೆದಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ 5 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಈ ಪೈಕಿ ಚುನಾವಣಾ ಕಣದಲ್ಲಿ 13 ಉಳಿದಿರುವ ಅಭ್ಯರ್ಥಿಗಳಾಗಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾದ ಹರೀಶ್.ಹೆಚ್.ಎನ್, ಉಮೇಶ್ ಚಂದ್ರ ಹೆಚ್.ಬಿ.ರಾಮು, ಸಿದ್ದರಾಮೇಗೌಡ ಹಾಗೂ ಬೋರಯ್ಯ ಅವರು ನಾಮಪತ್ರಗಳನ್ನು ಹಿಂಪಡೆದಿದ್ದಾರೆ.

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ 4 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಈ ಪೈಕಿ ಚುನಾವಣಾ ಕಣದಲ್ಲಿ 11 ಉಳಿದಿರುವ ಅಭ್ಯರ್ಥಿಗಳಾಗಿದ್ದಾರೆ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾದ ಬಿ.ಪ್ರಕಾಶ್, ಎ.ಆರ್.ರಘು, ಬಿ.ಎಲ್.ದೇವರಾಜ ಹಾಗೂ ಕುಮಾರ ಅವರು ನಾಮಪತ್ರಗಳನ್ನು ವಾಪಸ್ ಪಡೆದಿದ್ದಾರೆ.

ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ:

ಜನತಾದಳ (ಜ್ಯಾತ್ಯತೀತ) ಪಕ್ಷದ ಅಭ್ಯರ್ಥಿಯಾಗಿ ಡಿ.ಸಿ.ತಮ್ಮಣ್ಣ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ ಅಭ್ಯರ್ಥಿಯಾಗಿ ಜಿ.ಎಂ.ಮಧು, ಭಾರತೀಯ ಜನತಾ ಪಕ್ಷದಿಂದ ಎಂ.ಸತೀಶ್, ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ ಆಭ್ಯರ್ಥಿಯಾಗಿ ಹೀನಾ ಕೌಸರ್, ಸ್ವರಾಜ್ ಇಂಡಿಯಾ ಪಕ್ಷದ ಆಭ್ಯರ್ಥಿಯಾಗಿ ಲಿಂಗೇಗೌಡ ಎಸ್.ಹೆಚ್., ಫೆಡರಲ್ ಕಾಂಗ್ರೇಸ್ ಆಫ್ ಇಂಡಿಯಾ ಪಕ್ಷದ ಆಭ್ಯರ್ಥಿಯಾಗಿ ಡಾ.ಮನೋಜಿತ್ ಎಸ್.ಎಸ್, ಡಾ ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಆಭ್ಯರ್ಥಿಯಾಗಿ ವೆಂಕಟೇಶ.ಬಿ, ಪಕ್ಷೇತರ ಆಭ್ಯರ್ಥಿಯಾಗಿ ಮಹೇಶ್ ಕುಮಾರ್ ಪಿ.ಎಸ್, ಶಿವಮಾದೇಗೌಡ, ಚೇತನ್.ಬಿ, ಎನ್.ಸಿ ಪುಟ್ಟರಾಜು, ವೆಂಕಟೇಶ ಹಾಗೂ ಮಹೇಶ್.ಎಸ್.

ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ:

ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಆಭ್ಯರ್ಥಿಯಾಗಿ ಎಂ.ಪಿ.ನರೇಂದ್ರ ಸ್ವಾಮಿ, ಜನತಾದಳ (ಜ್ಯಾತ್ಯತೀತ) ಪಕ್ಷದ ಅಭ್ಯರ್ಥಿಯಾಗಿ ಡಾ. ಕೆ.ಅನ್ನದಾನಿ, ಭಾರತೀಯ ಜನಾತ ಪಕ್ಷದ ಆಭ್ಯರ್ಥಿಯಾಗಿ ಬಿ.ಸೋಮಶೇಖರ್, ಭಾರತೀಯ ರಾಷ್ಟ್ರೀಯ ಮಹಿಳಾ ಸರ್ವೋದಯ ಕಾಂಗ್ರೇಸ್ ಪಕ್ಷದ ಆಭ್ಯರ್ಥಿಯಾಗಿ ಎಂ.ಕೃಷ್ಣಮೂರ್ತಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಆಭ್ಯರ್ಥಿಯಾಗಿ ಮಂಟ್ಯಲಿಂಗು, ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ ಅಭ್ಯರ್ಥಿಯಾಗಿ ವಿಶ್ವನಾಥ್ ಜಿ.ಎಸ್, ರಾಷ್ಟ್ರೀಯ ಮಾನವ ವಿಕಾಸ ಪಾರ್ಟಿ ಅಭ್ಯರ್ಥಿಯಾಗಿ ಟಿ.ಸಿ.ವೆಂಕಟೇಶ್, ಇಂಡಿಯನ್ ನ್ಯೂ ಕಾಂಗ್ರೇಸ್ ಪಾರ್ಟಿ ಅಭ್ಯರ್ಥಿಯಾಗಿ ಎಂ.ಎಸ್ ಶಶಿಕುಮಾರ್, ಪಕ್ಷೇತರ ಆಭ್ಯರ್ಥಿಗಳಾಗಿ ಹೆಚ್.ಡಿ.ದೇವಪ್ರಸಾದ್, ಎಂ.ನಂಜಪ್ಪ, ಹೆಚ್.ಮಹದೇವ, ಟಿ.ಎನ್.ಸತೀಶ್ ಕುಮಾರ್ ಹಾಗೂ ಆರ್.ಸಿದ್ದರಾಜು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ:

ಜನತಾದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿಯಾಗಿ ಸಿ.ಎಸ್.ಪುಟ್ಟರಾಜು, ಭಾರತೀಯ ಜನತಾ ಪಕ್ಷದ ಆಭ್ಯರ್ಥಿಯಾಗಿ ಸುಂಡಹಳ್ಳಿ ಸೋಮಶೇಖರ, ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ದರ್ಶನ್ ಪುಟ್ಟಣ್ಣಯ್ಯ, ಜನ ಸಾಮಾನ್ಯರ ಪಾರ್ಟಿ ಅಭ್ಯರ್ಥಿಯಾಗಿ ಮಹೇಶ, ಎ.ಐ.ಎಂ.ಇ.ಪಿ ಪಕ್ಷದ ಅಭ್ಯರ್ಥಿಯಾಗಿ ಮಹೇಶ್, ಕರ್ನಾಟಕ ಜನತಾ ಪಕ್ಷದ ಆಭ್ಯರ್ಥಿಯಾಗಿ ಜಿ.ಎಂ.ರಮೇಶ್, ಸಮಾಜವಾಧಿ ಪಕ್ಷದ ಆಭ್ಯರ್ಥಿಯಾಗಿ ರೋಹಿಣಿ, ಪಕ್ಷೇತರ ಆಭ್ಯರ್ಥಿಗಳಾಗಿ ಅರುಣ್ ಕುಮಾರ್, ಕೆ.ಎಸ್.ದರ್ಶನ್, ಹೆಚ್.ನಾರಯಣ, ಪುಟ್ಟರಾಜು, ಬಿ.ಕೆ.ಪುಟ್ಟರಾಜು, ಡಿ.ಕೆ.ರವಿಕುಮಾರ್.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ:

ಭಾರತೀಯ ಜನತ ಪಕ್ಷದ ಆಭ್ಯರ್ಥಿಯಾಗಿ ಕೆ.ಎಸ್.ನಂಜುಂಡೇಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಆಭ್ಯರ್ಥಿಯಾಗಿ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಜನತಾದಳ (ಜ್ಯಾತ್ಯತೀತ) ಪಕ್ಷದ ಅಭ್ಯರ್ಥಿಯಾಗಿ ಎ.ಎಸ್.ರವೀಂದ್ರ, ಎ.ಐ.ಎಂ.ಇ.ಪಿ ಆಭ್ಯರ್ಥಿಯಾಗಿ ಸುರೇಶ್.ವಿ, ಆಮ್ ಆದ್ಮಿ ಪಕ್ಷದ ಆಭ್ಯರ್ಥಿಯಾಗಿ ಸಿ.ಎಸ್.ವೆಂಕಟೇಶ್, ಪ್ರಜಾ ಪರಿವರ್ತನಾ ಪಾರ್ಟಿ ಅಭ್ಯರ್ಥಿಯಾಗಿ ಸತೀಶ್ ಹೆಚ್.ಎಂ, ಪಕ್ಷೇತರ ಆಭ್ಯರ್ಥಿಗಳಾಗಿ ಕೆಂಪೇಗೌಡ, ಎಂ.ಎಂ.ಮಹೇಶ ಗೌಡ, ಮೋಹನ್ ಕುಮಾರ್, ಎಸ್.ಎಸ್.ರಾಜಶೇೀಖರಯ್ಯ ಹಾಗೂ ಸಿ.ಲಿಂಗೇಗೌಡ.

ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ:

ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಎನ್.ಚಲುವರಾಯಸ್ವಾಮಿ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಡಾ.ಪಾರ್ಥಸಾರಥಿ.ವಿ, ಜನತಾದಳ (ಜಾತ್ಯಾತೀತ) ಪಕ್ಷದ ಆಭ್ಯರ್ಥಿಯಾಗಿ ಸುರೇಶ್ ಗೌಡ, ಕರ್ನಾಟಕ ಜನತಾ ಪಕ್ಷದ ಆಭ್ಯರ್ಥಿಯಾಗಿ ಬಿ.ಎಸ್.ಗೌಡ, ಎ.ಐ.ಎಂ.ಇ.ಪಿ ಪಕ್ಷ ಅಭ್ಯರ್ಥಿಯಾಗಿ ವಸೀಂ ಉಲ್ಲಾ ಖಾನ್, ಪಕ್ಷೇತರ ಆಭ್ಯರ್ಥಿಗಳಾಗಿ ಎನ್.ಎಸ್.ಅಶೋಕ, ಬಿ.ವಿ.ಧರಣೇಂದ್ರಬಾಬು, ಯಡವನಹಳ್ಳಿ ಪಿ.ಸಿ.ಕೃಷ್ಣೇಗೌಡ, ರುಕ್ಮಿಣಿ ಹಾಗೂ ವೆಂಕಟೇಶ.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ:

ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಆಭ್ಯರ್ಥಿಯಾಗಿ ಪಿ.ರವಿಕುಮಾರ್, ಭಾರತೀಯ ಜನತಾ ಪಾರ್ಟಿ ಆಭ್ಯರ್ಥಿಯಾಗಿ ಶಿವಣ್ಣ.ಎನ್, ಜನತಾದಳ (ಜಾತ್ಯಾತೀತ) ಪಕ್ಷದ ಅಭ್ಯರ್ಥಿಯಾಗಿ ಎಂ.ಶ್ರೀನಿವಾಸ್, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅಭ್ಯರ್ಥಿಯಾಗಿ ಬಿ.ಎಸ್‍ಶಿವಕುಮಾರ್, ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಕ್ಷದ ಅಭ್ಯರ್ಥಿಯಾಗಿ ಕಾವೇರಿ ಶ್ರೇಯಾ ಎಂ.ಜೆ, ಪಕ್ಷೇತರ ಆಭ್ಯರ್ಥಿಗಳಾಗಿ ಮಂಜುನಾಥ್ ಎಸ್.ಜೆ, ಡಾ. ಎಸ್.ಸಿ.ಶಂಕರೇಗೌಡ, ಎಂ.ಬಿ.ನಾಗಣ್ಣ, ರಾಜೇಶ, ಕೃಷ್ಣ ಸಿ.ಎಂ, ಎಂ.ಸಿ ನಿತ್ಯಾನಂದ, ಕೆ.ಮಲ್ಲೇಶ, ಹಾಗೂ ಶಿವರಾಮು ಹೆಚ್.ಸಿ.

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ:

ಜನತಾದಳ (ಜ್ಯಾತ್ಯತೀತ) ಪಕ್ಷದ ಅಭ್ಯರ್ಥಿಯಾಗಿ ನಾರಯಣಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಆಭ್ಯರ್ಥಿಯಾಗಿ ಕೆ.ಬಿ.ಚಂದ್ರಶೇಖರ್, ಭಾರತೀಯ ಜನಾತ ಪಕ್ಷದ ಆಭ್ಯರ್ಥಿಯಾಗಿ ಬಿ.ಸಿ.ಮಂಜು, ಕರ್ನಾಟಕ ಪ್ರಜ್ಞಾವಂತ ಪಕ್ಷದ ಆಭ್ಯರ್ಥಿಯಾಗಿ ಎ.ಸಿ.ಕಾಂತ, ಪಕ್ಷೇತರ ಆಭ್ಯರ್ಥಿಗಳಾಗಿ ಎಲ್.ಆರ್.ರವಿಕುಮಾರ್, ಲೋಕೆಶ್ ಬಿ.ಎನ್, ಮಂಜುಳ, ಪುಟ್ಟಣ್ಣ ಎಸ್.ಗೌಡ, ಆರ್.ಜಗದೀಶ್, ಶಂಕರೇಗೌಡ.ಕೆ.ಎನ್. (ಎನ್.ಬಿ)

Leave a Reply

comments

Related Articles

error: