
ಬಾಲಿವುಡ್ ಹಾಟ್ ಕಪಲ್ ಗಳಾದ ರಣವೀರಸಿಂಗ್ – ದೀಪಿಕಾ ಪಡಕೋಣೆ ಯವರ ವಿವಾಹ ನಿಶ್ಚಿತಾರ್ಥವಾಗಿದೆಯಂತೆ. ಅವರಿಬ್ಬರೂ ಮದುವೆ ಮಾಡಿಕೊಳ್ಳುತ್ತಾರೆಂಬ ಅಂತೆ-ಕಂತೆ ಗಾಸಿಪ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬಾಲಿವುಡ್ನಲ್ಲಿ ಹರಿದಾಡುತ್ತಿದ್ದು ಇದಕ್ಕೆ ಪೂರಕವೆನ್ನುವಂತೆ ರಣವೀರ್ ಸಿಂಗ್ ಸಹ ದೀಪಿಕಾಳನ್ನು ಮದುವೆಯಾಗಲು ಇಚ್ಛಿಸಿರುವುದಾಗಿ ಬಹಿರಂಗವಾಗಿಯೇ ಹೇಳಿಕೆ ನೀಡಿರುವುದು ಮತ್ತಷ್ಟು ಪುಷ್ಟಿ ನೀಡಿದೆ.
ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಹಾಗೂ ಕಾರ್ಯಕ್ರಮ ನಿರೂಪಕ ಕರಣ್ ಜೋಹರ್ ಅವರ “ಕಾಫಿ಼ ವಿತ್ ಕರಣ್” ಶೋ ‘ರ್ಯಾಪಿಡ್ ಫೈರ್’ ಸುತ್ತಿನಲ್ಲಿ ಬಹಿರಂಗವಾಗಿಯೇ ದೀಪಿಕಾ ಪಡುಕೋಣೆಯನ್ನು ಮದುವೆಯಾಗಲು ಇಚ್ಛಿಸಿರುವುದಾಗಿ ರಣವೀರ್ ಸಿಂಗ್ ಹೇಳಿದ್ದಾರೆ. ಅಲ್ಲದೇ ಈಚೆಗೆ ರಿಲಾಯನ್ಸ್ ಮಾಲೀಕ ಮುಖೇಶ್ ಅಂಬಾನಿ ಹಾಗೂ ನೀತೂ ಅಂಬಾನಿಯವರು ಏರ್ಪಡಿಸಿದ್ದ ಪಾರ್ಟಿಯಲ್ಲಿಯೂ ಈ ಜೋಡಿ ಕೈ ಕೈ ಹಿಡಿದು ಜೊತೆ ಜೊತೆಯಾಗಿಯೇ ಹೆಚ್ಚು ಸಮಯ ಕಳೆದಿದ್ದರಿಂದ ಮದುವೆ ವಿಷಯಕ್ಕೆ ಮತ್ತಷ್ಟು ಪುಷ್ಠಿ ಬಂದಂತಾಗಿದೆ.
ವರ್ಷಗಳ ಹಿಂದೆ ಈ ಜೋಡಿ ಬಗ್ಗೆ ಗಾಸಿಪ್ಗಳು ಹರಿದಾಡಿದ್ದವು. ನಂತರ ಬ್ರೇಕಪ್ ಆದ ಬಗ್ಗೆಯೂ ಗುಸುಗುಸು ಶುರುವಾಗಿತ್ತು. ಈಗ ಇವರಿಬ್ಬರೂ ಒಟ್ಟಾಗಿ ಓಡಾಡ್ತಿರೋದರಿಂದ ಮತ್ತೆ ಗಾಸಿಪ್
ಗಳಿಗೆ ಪುಷ್ಟಿ ಬಂದಿದೆ.
ಮದುವೆ ಬಗ್ಗೆ ಪ್ರತಿಕ್ರಿಯಿಸಿರುವ ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ, “ಮದುವೆ ಎನ್ನುವುದು ವ್ಯಕ್ತಿಯ ವೈಯುಕ್ತಿಕ ವಿಚಾರ. ಆಕೆಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ನಿರ್ಣಯಿಸುವ ಸಾರ್ಮಥ್ಯವಿದ್ದು, ಆಕೆಯ ಇಚ್ಛೆಯಂತೆ ನಡೆಯಲಿ. ನನ್ನದೇನೂ ಅಭ್ಯಂತರವಿಲ್ಲ” ಎಂದು ನಿಯತಕಾಲಿಕವೊಂದಕ್ಕೆ ತಿಳಿಸಿದ್ದಾರೆ.