ದೇಶ

ದುಷ್ಕರ್ಮಿಗಳಿಂದ ಹಲ್ಲೆ: ನವವಧು ಸಾವು

ಲಕ್ನೋ,ಏ.30: ಮದುವೆ ಮುಗಿಸಿ ಮನೆಗೆ ತೆರಳಿದ್ದ  ನವ ವಿವಾಹಿತರ ವಾಹನದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ವಧುವನ್ನು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ರಾಷ್ಟ್ರೀಯ ಹೆದ್ದಾರಿ58 ರಲ್ಲಿ ನಡೆದಿದೆ.

ಮಹ್ವಿಶ್ ಪರ್ವೀನ್(18) ಮೃತ ನವವಿವಾಹಿತೆ. ವಧು ಪರ್ವೀನ್, ವರ ಮೊಹಮ್ಮದ್ ಷಾಝೆಬ್(22) ಹಾಗೂ ಇತರೆ ಮೂವರು ಕುಟುಂಬ ಸದಸ್ಯರು ಶುಕ್ರವಾರ ಗಾಜಿಯಾಬಾದ್ ನಹ್ಲಾ ಹಳ್ಳಿಯಲ್ಲಿ ಮದುವೆ ಮುಗಿಸಿಕೊಂಡು ಕಾರಿನಲ್ಲಿ ಮುಜಫರ್ ನಗರದ ಮನೆಗೆ ಹಿಂದಿರುಗುತ್ತಿದ್ದರು. ಮೀರತ್ ಜಿಲ್ಲೆಯ ಮಟೋರಾ ಗ್ರಾಮದ ಬಳಿ ಕಾರು ಹೋಗುತ್ತಿದ್ದಂತೆಯೇ ನವ ವಿವಾಹಿತರಿದ್ದ ವಾಹನದ ಮೇಲೆ ಎರಡು ಕಾರುಗಳಲ್ಲಿ ಶಸ್ತ್ರಸಜ್ಜಿತವಾಗಿ ಬಂದ ಸುಮಾರು 12 ದರೋಡೆಕೋರರು ಕಾರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಕಾರಿನಲ್ಲಿದ್ದ ಓರ್ವರ ಮೇಲೆ ಗನ್ ಪಾಯಿಂಟ್ ಇಟ್ಟರು. ಈ ವೇಳೆ ವಧು ಪರ್ವೀನ್ ಭಯದಿಂದ ಕಿರುಚಿಕೊಂಡಿದ್ದಾರೆ. ಆಗ ದರೋಡೆಕೋರ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ಲಕ್ಷಾಂತರ ರೂ. ಮೌಲ್ಯದ ಹಣ, ಬಂಗಾರವನ್ನು ದೋಚಿ ಪರಾರಿಯಾಗಿದ್ದಾರೆ. ವಧು ಸಾವನಪ್ಪಿದ್ದಾಳೆ. ಕುರಿತು ದರೋಡೆ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದೇವೆ. ಹೆದ್ದಾರಿಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸುತ್ತಿದೆ ಎಂದು ಮೀರತ್ ನ ಎಸ್‍ಪಿ ದ್ವಿವೇದಿ ಹೇಳಿದ್ದಾರೆ. (ಪಿ.ಎಸ್ )

Leave a Reply

comments

Related Articles

error: