ಮೈಸೂರು

ಅಂತರ ಕಾಲೇಜು ಹಾಕಿ ಪಂದ್ಯಾವಳಿಗೆ ಚಾಲನೆ

ಮೈಸೂರು,ಏ.30-ವಿದ್ಯಾವರ್ಧಕ ಇಂಜನಿಯರಿಂಗ ಕಾಲೇಜು, ದೈಹಿಕ ಶಿಕ್ಷಣ ಮತ್ತು ಕ್ರೀಡಾ ಇಲಾಖೆ, ವಿಶ್ವೇಶ್ವರಯ್ಯ ತಂತ್ರಜ್ಞಾನ ವಿಶ್ವವಿದ್ಯಾನಿಲಯದ ವತಿಯಿಂದ ಎಸ್ ಜೆಸಿಇ ಹಾಕಿ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಅಂತರ ಕಾಲೇಜು ಹಾಕಿ ಪಂದ್ಯಾವಳಿಗೆ ಅಂತಾರಾಷ್ಟ್ರೀಯ ಹಾಕಿ ಆಟಗಾರ್ತಿ ಬಿ.ಜಿ.ಹೇಮಲತಾ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕ್ರೀಡೆ ನಮ್ಮನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಬೇಕು. ಹಿಂದೆ ದಕ್ಷಿಣ ಭಾರತದವರನ್ನು ಬೆಳೆಯಲು ಬಿಡುತ್ತಿರಲಿ‍ಲ್ಲ. ಅಷ್ಟರ ಮಟ್ಟಿಗೆ ಅಸಮಾನತೆ ಇತ್ತು. ಈಗ ಅವಕಾಶಗಳಿದ್ದು ಅದನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು.

ಬೆಂಗಳೂರು, ಮೈಸೂರು, ಧಾರವಾಡ, ನಿಟ್ಟೆ, ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಮಂಗಳೂರು ಸೇರಿದಂತೆ 16 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲು ಆಗಮಿಸಿವೆ.

ಈ ಸಂದರ್ಭದಲ್ಲಿ ಜೆಎಸ್ಎಸ್ಎಸ್ಟಿಯು ಕುಲಪತಿ ಪ್ರೊ.ಕೆ.ಎಸ್.ಲೋಕೇಶ್, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಅಧ್ಯಕ್ಷ ಗುಂಡಪ್ಪಗೌಡ ಉಪಸ್ಥಿತರಿದ್ದರು. (ಎಂ.ಎನ್)

Leave a Reply

comments

Related Articles

error: