ಮೈಸೂರು

ಸಮಾಜದಲ್ಲಿ ಅರಿವಿನ ಕೊರತೆ ಬಹಳವಾಗಿದೆ : ಪದ್ಮಭೂಷಣ ಡಾ.ಎಂ.ಮಹದೇವಪ್ಪ

ಮೈಸೂರು,ಏ.30:- ಯಾವುದೇ ವಿಷಯದ ಕುರಿತಾದರೂ ಅರಿವು ಮುಖ್ಯವಾಗಿದ್ದು, ಸಮಾಜದಲ್ಲಿ ಅರಿವಿನ ಕೊರತೆ ಬಹಳವಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮಭೂಷಣ ಡಾ.ಎಂ.ಮಹದೇವಪ್ಪ ತಿಳಿಸಿದರು.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಆವರಣದಲ್ಲಿಂದು ವಿವಿ ವತಿಯಿಂದ ನಡೆದ ನೃತ್ಯ ಸಮಾರಾಧನಾ, ವಿಶ್ವ ನೃತ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ವಾರ್ತಾ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ನನಗೂ ಈ ವಿಶ್ವವಿದ್ಯಾನಿಲಯಕ್ಕೂ ಹಳೆಯ ಒಡನಾಟವಿದೆ. ಈ ವಿಶ್ವವಿದ್ಯಾನಿಲಯವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಇಲ್ಲಿ ಏನೆಲ್ಲ ನಡೆಯುತ್ತಿದೆ ಎನ್ನುವ ಕುರಿತು ತಿಳಿದುಕೊಳ್ಳುತ್ತಿದ್ದೆ ಎಂದರು. ಐದು ವರ್ಷಗಳ ಕಾಲ ಪತ್ರಿಕೆಯ ಸಂಪಾದಕನಾಗಿದ್ದೆ. ವಿಶ್ವವಿದ್ಯಾನಿಲಯಗಳಲ್ಲಿ ಉಪನ್ಯಾಸಗಳು, ವಿಚಾರಸಂಕಿರಣಗಳು, ಸಮ್ಮೇಳನಗಳು ಸಾಕಷ್ಟು ನಡೆಯುತ್ತಿರುತ್ತದೆ. ಆದರೆ ಸಮಾಜದಲ್ಲಿ ಅರಿವಿನ ಕೊರತೆ ಬಹಳವಿದೆ. ಅದನ್ನು ಹೋಗಲಾಡಿಸಲು ಮುಂದಾಗಬೇಕು. ಸಾರ್ವಜನಿಕರಲ್ಲಿ ಅರಿವಿನ ಕೊರತೆಯನ್ನು ನೀಗಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಸರ್ವಮಂಗಳಾ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ನೃತ್ಯಾಲಯ ಟ್ರಸ್ಟ್ ನಿರ್ದೇಶಕರಾದ ಡಾ.ತುಳಸೀ ರಾಮಚಂದ್ರ, ಹೈದ್ರಾಬಾದ್ ಐಐಐಟಿ ಸಹಾಯಕ ಪ್ರಾಧ್ಯಾಪಕ ಎಸ್. ಜಯಚಂದ್ರನ್, ಕುಲಸಚಿವ ಡಾ.ನಾಗೇಶ್ ವಿ.ಬೆಟ್ಟಕೋಟೆ, ಪರೀಕ್ಷಾಂಗ ಕುಲಸಚಿವ ಪ್ರೊ.ಆರ್.ರಾಜೇಶ್, ವಿತ್ತಾಧಿಕಾರಿ ಎಸ್.ಎನ್.ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಹಲವರು ನೃತ್ಯ ಪ್ರದರ್ಶನ ನೀಡಿದರು. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: