ಲೈಫ್ & ಸ್ಟೈಲ್

ಆಕರ್ಷಕವಾಗಿ ಕಾಣಿಸಲು ಪುರುಷರು ಈ ಆಹಾರಗಳನ್ನು ಮರೆಯದೇ ಸೇವಿಸಿ

ತಾನು ಸುಂದರವಾಗಿ ಕಾಣಿಸಬೇಕೆನ್ನುವ ಇಚ್ಛೆ ಯಾರಿಗೆ ತಾನೇ ಇರಲ್ಲ ಹೇಳಿ..? ಎಲ್ಲರಿಗೂ ತಾನು ಸುಂದರವಾಗಿ, ಆಕರ್ಷಕವಾಗಿ ಕಾಣಿಸಬೇಕೆನ್ನುವ ಮಹದಾಸೆ ಇರುತ್ತದೆ. ಅದರಲ್ಲೂ ವಿವಾಹದ ನಿರೀಕ್ಷೆಯಲ್ಲಿರುವ ಹುಡುಗರಿಗೆ ತಾನು ಇನ್ನೂ ಸುಂದರವಾಗಿ ಕಾಣಿಸಿ ಎಲ್ಲರ ಗಮನವನ್ನೂ ತನ್ನತ್ತ ಸೆಳೆಯಬೇಕೆಂಬ ಹಂಬಲವಿರುತ್ತದೆ. ಹಾಗಿದ್ದರೆ ನೀವು ಆಕರ್ಷಕವಾಗಿ ಕಾಣಿಸಲು ಪ್ರತಿದಿನ ನಿಮ್ಮ ಆಹಾರದಲ್ಲಿ ತಪ್ಪದೇ ಇವುಗಳನ್ನು ಸೇವಿಸಿ.

nuts-webನಟ್ಸ್ : ಬೆಳಗಿನ ಉಪಹಾರದಲ್ಲಿ ನಟ್ಸ್ ಗಳನ್ನು ಸೇವಿಸಿ. ಇದರಲ್ಲಿ ಆ್ಯಂಟಿಆ್ಯಂಕ್ಸಿಡೆಂಟ್ಸ್ ಗಳಿದ್ದು, ಮನಸ್ಸು ಪ್ರಶಾಂತವಾಗಿರುತ್ತದೆ. ಇದರಲ್ಲಿರುವ ವಿಟಾಮಿನ್ -ಇ ನಿಮ್ಮ ಲುಕ್ ನ್ನು ಆಕರ್ಷಿಸಲು ಸಹಕರಿಸುತ್ತದೆ.

safforn-webಕೇಸರಿಯುಕ್ತ ಹಾಲು : ಇದರಲ್ಲಿ ಸೆಫ್ರನಲ್ ಇರುತ್ತದೆ. ಇದು ಮುಖದ ತ್ವಚೆಯ ಅಂದವನ್ನು ಹೆಚ್ಚಿಸುತ್ತದೆ. ಕುಡಿಯುವುದರಿಂದ ಶಕ್ತಿ ದೊರಕುವ ಮೂಲಕ ನಿಶ್ಯಕ್ತಿ ದೂರಾಗುತ್ತದೆ. ಇದನ್ನೂ ಸಹ ಉಪಹಾರದ ಸಮಯದಲ್ಲೇ ಸೇವಿಸಬಹುದು.

papppaya-webಪಪ್ಪಾಯ : ಇದರಲ್ಲಿ ಪಪಾಯಿನ್ ಅಂಶವಿದ್ದು, ತ್ವಚೆ ಬಿಳುಪಾಗಲು ಸಹರಿಸುತ್ತದೆ. ಇದನ್ನು ಫ್ರೂಟ್ಸ್ ಚಾಟ್ಸ್ ಜೊತೆ ಸೇವಿಸಿ ಅಥವಾ ಜ್ಯೂಸ್ ಮಾಡಿ ಕುಡಿಯಿರಿ.

elneeru-webಎಳನೀರು : ಇದರಲ್ಲಿ ಇಲೆಕ್ಟ್ರೋಲಾಯಿಟಸ್ ಅಂಶವಿದ್ದು, ಮುಖದ ಅಂದವನ್ನು ಹೆಚ್ಚಿಸುತ್ತದೆ. ದಿನಕ್ಕೆ ಒಂದು ಸಲ ಎಳನೀರನ್ನು ಸೇವಿಸಿ.

green-tea-webಬ್ಲ್ಯಾಕ್ ಟೀ : ಇದರಲ್ಲಿ ಪಾಲಿಫೆನಾಲ್ಸ್ ಅಂಶವಿದ್ದು, ಕೂದಲಿಗೆ ಹೊಳಪನ್ನು ನೀಡಲಿದೆ. ಶರೀರದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದಿನಕ್ಕೆರಡು ಬಾರಿ ಬ್ಲ್ಯಾಕ್ ಟೀ ಸೇವಿಸಿ.

apple-webಸೇಬು : ಫಾಯ್ಬರ್ ಅಂಶ ಹೇರಳವಾಗಿದ್ದು, ಇದರ ಸೇವನೆಯಿಂದ ಹಸಿವನ್ನು ನಿಯಂತ್ರಿಸಬಹುದು. ಶರೀರದ ತೂಕವನ್ನು ನಿಯಂತ್ರಣದಲ್ಲಿರಿಸುತ್ತದೆ. ಪ್ರತಿದಿನ ಒಂದು ಸೇಬು ಸೇವಿಸಿ.

cucumber-webಸೌತೆಕಾಯಿ : ಇದರಲ್ಲಿ ನೀರಿನಂಶ ಹೇರಳವಾಗಿದ್ದು, ತ್ವಚೆಯು ಮೃದುವಾಗಿರುತ್ತದಲ್ಲದೇ, ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಪ್ರತಿದಿನವೂ ಸೌತೆಕಾಯಿಯನ್ನು ತಿನ್ನಿರಿ  ಅಥವಾ ಅದರ ಜ್ಯೂಸನ್ನಾದರೂ ಕುಡಿಯಿರಿ.

otas-webಓಟ್ಸ್ : ಫಾಯ್ಬರ್ ಅಂಶ ಹೇರಳವಾಗಿದ್ದು, ಶರೀರದಲ್ಲಿನ ಕಲ್ಮಶಗಳು ದೂರಾಗಿಸುತ್ತದೆ. ತ್ವಚೆಯು ಮೃದುವಾಗಿ ಕಾಂತಿಯುಕ್ತವಾಗುತ್ತದೆ. ಪ್ರತಿದಿನ ಒಂದು ಮುಷ್ಠಿಯಾದರೂ ಓಟ್ಸ್ ಸೇವಿಸಿ.

siya-webಸೋಯಾಬಿನ್ : ಇದರಲ್ಲಿ ಆಯ್ಸೊಫ್ಲೆವಾನ್ಸ್ ಅಂಶವಿದ್ದು, ತ್ವಚೆಯು ಸುಕ್ಕುಗಟ್ಟುವುದನ್ನು ತಡೆಯಲಿದೆ. ಕೂದಲ ಬೆಳವಣಿಗೆಯಾಗಲಿದೆ. ಇದರಿಂದ ಸೋಯಾ ಮಿಲ್ಕ್ ಕುಡಿಯಿರಿ ಅಥವಾ ಆಹಾರದಲ್ಲಿ ಅಳವಡಿಸಿಕೊಳ್ಳಿ.

daal-webಬೇಳೆಗಳು : ಕಬ್ಬಿಣದಂಶ ಹೇರಳವಾಗಿದ್ದು, ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ. ದಿನಕ್ಕೊಂದು ಮುಷ್ಠಿಯನ್ನಾದರೂ ಬೇಳೆಗಳನ್ನು ಆಹಾರದಲ್ಲಿ ಸೇವಿಸಿ.

egg-webಮೊಟ್ಟೆ : ಉಪಹಾರದಲ್ಲಿ ಎರಡು ಬೇಯಿಸಿದ ಮೊಟ್ಟೆಗಳನ್ನು ಸೇವಿಸಿ. ಇದರಿಂದ ನಿಮ್ಮ ತ್ವಚೆಯ ಅಂದವು ಹೆಚ್ಚುತ್ತದಲ್ಲದೇ, ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಇವುಗಳನ್ನು ನಿಮ್ಮ ಆಹಾರದಲ್ಲಿ ಅಳವಡಿಸಿಕೊಂಡು ಸುಂದರವಾಗಿ ಕಾಣಿಸಲು ಪ್ರಯತ್ನಿಸಬಹುದು.

 

Leave a Reply

comments

Related Articles

error: