ಮೈಸೂರು

ಮೈವಿವಿ ಕುಲಪತಿ ಪ್ರೊ.ಸಿ.ಬಸವರಾಜು ಅವರನ್ನು ವಜಾಗೊಳಿಸಲು ಒತ್ತಾಯ : ಪ್ರೊ.ಮಹೇಶ ಚಂದ್ರಗುರು.

ಮೈಸೂರು,ಏ.30 : ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿಯಾದ ಪ್ರೊ.ಸಿ.ಬಸವರಾಜು ಅವರು ಭಷ್ಟಾ ಹಾಗೂ ವಾಮ ಮಾರ್ಗದಿಂದ ಕಾನೂನು ವಿಭಾಗದ ಪ್ರಾಧ್ಯಾಪಕರಾಗಿದ್ದು ಇವರೊಂದಿಗೆ ಇತರೆ 108 ಜನರ ನೇಮಕಾತಿಯೂ ಕಾನೂನು ಬಾಹಿರವಾಗಿದ್ದು ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು  ಇವರನ್ನು ಕುಲಪತಿ ಹುದ್ದೆಯಿಂದ ತೆರವುಗೊಳಿಸಬೇಕೆಂದು ಡಾ.ಮಹೇಶ ಚಂದ್ರಗುರು ಮನವಿ ಮಾಡಿದ್ದಾರೆ.

ಸರ್ಕಾರಿ ಹುದ್ದೆಯಲ್ಲಿದ್ದುಕೊಂಡು ಚುನಾವಣಾ ಪ್ರಚಾರ ಮಾಡಿದರೆಂಬ ಆರೋಪದಡಿ ಈಚೆಗೆ ವಜಾಗೊಂಡಿರುವ ಪ್ರೊ.ಮಹೇಶ್ ಚಂದ್ರ ಗುರು ಅವರು ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಮಾಡಿದ್ದು, ಕುಲಪತಿ ಬಸವರಾಜ ಅವರ ವೃತ್ತಿಪರ ಅನುಭವ ಕಾನೂನು ಬಾಹಿರವಾಗಿದೆ, ಕುಲಸಚಿವರಾಗಿ ಹಲವಾರು ಅಕ್ರಮ ಎಸಗಿ ಅಮಾನತ್ತಿಗೂ ಒಳಗಾಗಿದ್ದರು, ಆದರೆ ರಾಜಕೀಯ ಪ್ರಭಾವದಿಂದ ಸರ್ಕಾರದ ಮೇಲೆ ಒತ್ತಡ ತಂದು ಸೇವೆಯನ್ನು ಆರಂಭಿಸಿದ್ದರು, ಅಲ್ಲದೇ ಪ್ರಸ್ತುತ ಹಂಗಾಮಿ ಕುಲಪತಿಯಾಗಿ ನೇಮಕವಾಗಿ ವಿವಿಯ ಆಡಳಿತವನ್ನು ಹದಗೆಡಿಸುತ್ತಿದ್ದಾರೆಂದು ಆರೋಪ ಮಾಡಿದ್ದಾರೆ.

ಹಲವಾರು ಅಕ್ರಮಗಳವೆಸಗಿರುವ ಇವರನ್ನು ಕುಲಪತಿ ಹುದ್ದೆಯಿಂದ ವಜಾಗೊಳಿಸಿ ಹಾಗೂ ಯಾವುದೇ ವಿಶ್ವವಿದ್ಯಾನಿಲಯಕ್ಕೂ ಇವರನ್ನು ನೇಮಕಗೊಳಿಸಬಾರದೆಂದು ರಾಜ್ಯಪಾಲರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: