ಮೈಸೂರು

ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್ ಪಿಯು ಕಾಲೇಜು: ವಿಜ್ಞಾನದಲ್ಲಿ ಪ್ರವೀಣ್ ಈರಯ್ಯ ದೇವಡಿಗ, ವಾಣಿಜ್ಯದಲ್ಲಿ ಸಿತಾರಾ ರಾವ್ ಪ್ರಥಮ

ಮೈಸೂರು,ಏ.30-ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮೈಸೂರಿನ ವಿಜಯನಗರದಲ್ಲಿರುವ ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪ್ರವೀಣ್ ಈರಯ್ಯ ದೇವಡಿಗ 581 (96.83), ವಾಣಿಜ್ಯ ವಿಭಾಗದಲ್ಲಿ ಸಿತಾರಾ ರಾವ್ 585 (97.50) ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಪ್ರವೀಣ್ ಈರಯ್ಯ ದೇವಡಿಗ ಕನ್ನಡದಲ್ಲಿ 97, ಇಂಗ್ಲಿಷ್ ನಲ್ಲಿ 87, ಭೌತಶಾಸ್ತ್ರದಲ್ಲಿ 100, ರಸಾಯನಶಾಸ್ತ್ರ 97, ಗಣಿತಶಾಸ್ತ್ರದಲ್ಲಿ 100, ಕಂಪ್ಯೂಟರ್ ಸೈನ್ಸ್ ನಲ್ಲಿ 100 ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

ದುಷ್ಯಂತ್ ಪಿ.ಗೌಡ ಹಿಂದಿಯಲ್ಲಿ 95, ಇಂಗ್ಲಿಷ್ ನಲ್ಲಿ 92, ಭೌತಶಾಸ್ತ್ರದಲ್ಲಿ 96, ರಸಾಯನಶಾಸ್ತ್ರದಲ್ಲಿ 97, ಗಣಿತಶಾಸ್ತ್ರದಲ್ಲಿ 100, ಎಲೆಕ್ಟ್ರಾನಿಕ್ಸ್ ನಲ್ಲಿ 99 ಒಟ್ಟಾರೆ 579 (96.50) ಅಂಕ ಗಳಿಸಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಎನ್.ಚೈತ್ರ ಕನ್ನಡದಲ್ಲಿ 96, ಇಂಗ್ಲಿಷ್ ನಲ್ಲಿ 94, ಭೌತಶಾಸ್ತ್ರದಲ್ಲಿ 96, ರಸಾಯನಶಾಸ್ತ್ರದಲ್ಲಿ 93, ಗಣಿತಶಾಸ್ತ್ರದಲ್ಲಿ 100, ಜೈವಿಕಶಾಸ್ತ್ರದಲ್ಲಿ 98 ಒಟ್ಟು 577 (96.17) ಅಂಕಗಳಿಸಿ ವಿಜ್ಞಾನ ವಿಭಾಗದಲ್ಲಿ ಮೂರನೇ ಸ್ಥಾನ ಗಳಿಸಿದ್ದಾರೆ.

ಇನ್ನೂ ವಾಣಿಜ್ಯ ವಿಭಾಗದಲ್ಲಿ ಸಿತಾರಾ ರಾವ್ ಪ್ರಥಮ, ಟಿ.ಎನ್.ನೀತಿ ದ್ವಿತೀಯ, ಸಿ.ಕೆ.ಪೂಜಾ ತೃತೀಯ ಸ್ಥಾನ ಗಳಿಸಿದ್ದಾರೆ. ಸಿತಾರಾ ರಾವ್ ಕನ್ನಡದಲ್ಲಿ 92, ಇಂಗ್ಲಿಷ್ ನಲ್ಲಿ 92, ಬ್ಯುಸಿನೆಸ್ ಸ್ಟಡೀಸ್ ನಲ್ಲಿ 100, ಅಕೌಂಟೆನ್ಸಿಯಲ್ಲಿ 100, ಸಂಖ್ಯಾಶಾಸ್ತ್ರದಲ್ಲಿ 100, ಬೇಸಿಕ್ಸ್ ಮ್ಯಾಥ್ಸ್ ನಲ್ಲಿ 100 ಒಟ್ಟು 585 (95.50) ಅಂಕಗಳಿಸಿದ್ದಾರೆ.

ಟಿ.ಎನ್.ನೀತಿ ಸಂಸ್ಕೃತದಲ್ಲಿ 98, ಇಂಗ್ಲಿಷ್ ನಲ್ಲಿ 90, ಬ್ಯುಸಿನೆಸ್ ಸ್ಟಡೀಸ್ ನಲ್ಲಿ 100, ಅಕೌಂಟೆನ್ಸಿಯಲ್ಲಿ 94, ಸಂಖ್ಯಾಶಾಸ್ತ್ರದಲ್ಲಿ 100, ಕಂಪ್ಯೂಟರ್ ಸೈನ್ಸ್ ನಲ್ಲಿ 100 ಒಟ್ಟು 582 (97) ಅಂಕ ಪಡೆದುಕೊಂಡಿದ್ದಾರೆ.

ಸಿ.ಕೆ.ಪೂಜಾ ಕನ್ನಡದಲ್ಲಿ 94, ಇಂಗ್ಲಿಷ್ ನಲ್ಲಿ 88, ಬ್ಯುಸಿನೆಸ್ ಸ್ಟಡೀಸ್ ನಲ್ಲಿ 100, ಅಕೌಂಟೆನ್ಸಿಯಲ್ಲಿ 93, ಸಂಖ್ಯಾಶಾಸ್ತ್ರದಲ್ಲಿ 100, ಕಂಪ್ಯೂಟರ್ ಸೈನ್ಸ್ ನಲ್ಲಿ 92 ಅಂಕಗಳಿಸಿದ್ದಾರೆ. (ಎಚ್.ಎನ್, ಎಂ.ಎನ್)

Leave a Reply

comments

Related Articles

error: