
ಪ್ರಮುಖ ಸುದ್ದಿ
ಅಪಘಾತದಲ್ಲಿ ಗಾಯಗೊಂಡವನಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ದರ್ಶನ್ ಪುಟ್ಟಣ್ಣಯ್ಯ
ರಾಜ್ಯ(ಮಂಡ್ಯ)ಮೇ.1:- ಮಾನವೀಯತೆ ಮೆರೆದು ಇತ್ತೀಚೆಗೆ ದರ್ಶನ್ ಪುಟ್ಟಣ್ಣಯ್ಯ ಸುದ್ದಿಯಾಗುತ್ತಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರಿಗೆ ದರ್ಶನ್ ಪುಟ್ಟಣ್ಣಯ್ಯ ನೆರವಾಗಿದ್ದಾರೆ.
ಬಿ.ಹಟ್ನ ಗ್ರಾಮದ ಬಳಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪಾದಚಾರಿಗೆ ಗುದ್ದಿತ್ತು. ಪಾದಚಾರಿ ಬಾರಿ ಮಳೆ, ಗಾಳಿಯ ನಡುವೆ ಸಾಗುತ್ತಿದ್ದ ಎನ್ನಲಾಗಿದೆ. ಮಳೆಯ ನಡುವೆಯೇ ಚುನಾವಣಾ ಪ್ರಚಾರಕ್ಕೆ ದರ್ಶನ್ ಪುಟ್ಟಣ್ಣಯ್ಯ ತೆರಳುತ್ತಿದ್ದರು. ದಿವಂಗತ ರೈತನಾಯಕ ಪುಟ್ಟಣ್ಣಯ್ಯನವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿದ್ದು, ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಅವರು ತಕ್ಷಣ ನೆರವು ನೀಡಿದ್ದಾರೆ. ಪ್ರಚಾರ ಕಾರ್ಯ ಕೈಬಿಟ್ಟು ಪ್ರಾಣ ಉಳಿಸಲು ಮಂಡ್ಯದ ಆಸ್ಪತ್ರೆಯತ್ತ ಸಾಗಿದರು. ಗಾಯಾಳುವನ್ನು ತನ್ನ ವಾಹನದಲ್ಲಿ ಕರೆತಂದು ಮಂಡ್ಯದ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. (ಕೆ.ಎಸ್,ಎಸ್.ಎಚ್)