ಪ್ರಮುಖ ಸುದ್ದಿ

 ಕರ್ನಾಟಕದಲ್ಲಿ ಕಾಂಗ್ರೆಸ್ ಕೌಟುಂಬಿಕ ರಾಜಕಾರಣವನ್ನು ಮಾಡುತ್ತಿದೆ : ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ

ರಾಜ್ಯ( ಚಾಮರಾಜನಗರ)ಮೇ.1:-  ಕರ್ನಾಟಕದಲ್ಲಿ 2+1, 1+1 ಕೌಟುಂಬಿಕ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಚಾಮರಾಜನಗರದ ಸಂತೇಮರಹಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನುದ್ದೇಶಿಸಿ  ಮಾತನಾಡಿದರು. ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಕನ್ನಡ ನಾಡಿನ ಜನತೆಗೆ ನನ್ನ ನಮಸ್ಕಾರಗಳು ಎಂದು ಹೇಳಿ ಮಂಟೇಸ್ವಾಮಿ, ಮಲೆಮಹದೇವಶ್ವರ ಸ್ವಾಮಿ. ಬಿಳಿಗಿರಿರಂಗ, ಹಿಮವದ್ ಗೋಪಾಲಸ್ವಾಮಿ ಅವರನ್ನು ಸ್ಮರಿಸಿದರು. ಚಾಮರಾಜನಗರ ಜಿಲ್ಲೆಯಲ್ಲಿ ಹುಟ್ಟಿದ ಜಿ.ಪಿ ರಾಜರತ್ನಂ, ಡಾ.ರಾಜಕುಮಾರ್ ನೆನಪಿಸಿಕೊಂಡರು. ಇಲ್ಲಿ ನೆರೆದಿರುವ ಜನಸ್ತೋಮ ನೋಡುತ್ತಿದ್ದರೆ ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಹವಾ ಇಲ್ಲ. ಇಲ್ಲಿ ಬಿರುಗಾಳಿಯೇ ಎದ್ದಿದೆ. ಇಂದು ಕಾರ್ಮಿಕ ದಿನ. ಕಾರ್ಮಿಕ ಬಂಧುಗಳ ಸ್ಮರಿಸುತ್ತ ಶ್ರಮಿಕ ವರ್ಗಕ್ಕೆ ಶುಭಾಶಯ ಹೇಳಲು ಇಚ್ಛಿಸುತ್ತೇನೆ.  ಇಂದು ಗುಜರಾತ್ ,ಮಹಾರಾಷ್ಟ್ರ ಉದಯವಾದ ದಿನ. ನಮ್ಮ ಕಾರ್ಮಿಕರ ಬಗ್ಗೆ ದೇಶವನ್ನು ಸುದೀರ್ಘವಾಗಿ  ಆಳಿದ ಪಕ್ಷಕ್ಕೆ ಕಾಳಜಿ ಇಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು. 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ನಾವು 18ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಗುಡ್ಡಗಾಡು, ಪರ್ವತ ಪ್ರದೇಶ, ಅರಣ್ಯ ಪ್ರದೇಶಕ್ಕೆ ವಿದ್ಯುತ್ ಕಲ್ಪಿಸಲು ಸೋಲಿಗರು, ಬುಡಕಟ್ಟು ಜನಾಂಗದವರು, ಅರಣ್ಯ ವಾಸಿಗಳ ಪರಿಶ್ರಮವಿದೆ. ಇದನ್ನು ಕಾಂಗ್ರೆಸ್ ನ ಹೊಸ ಅಧ್ಯಕ್ಷರು ಅವಮಾನಿಸುತ್ತಿದ್ದಾರೆ ಎಂದರು. ನಾನು ಸಂಸತ್ ನಲ್ಲಿ 15 ನಿಮಿಷ ಮಾತನಾಡಿದರೆ ಮೋದಿ ಕುಳಿತುಕೊಳ್ಳಲು ಆಗಲ್ಲ ಅಂದರು. ಅವರು 15 ನಿಮಿಷ ಮಾತನಾಡುತ್ತಾರೆ ಎಂದರೆ ಅದೇ ಒಂದು ಸಾಧನೆ ಬಿಡಿ ಎಂದು ವ್ಯಂಗ್ಯವಾಡಿದ ಪ್ರಧಾನಿ ಮೋದಿ, ತಾವು ಹೆಸರು ಗಳಿಸಿದವರು, ಪ್ರಖ್ಯಾತ ಕುಟುಂಬದವರು. ನಿಮ್ಮ ಮುಂದೆ ನಮ್ಮಂತ ಕೆಲಸಗಾರರು,  ಹೀಗೆ ಕೂರಲು ಸಾಧ್ಯವಿಲ್ಲ.  ತಮ್ಮ ಮಾತುಗಳಿಂದ ನಮ್ಮನ್ನು ಘಾಸಿಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ನಿಮ್ಮಂತ ಹೆಸರು ಗಳಿಸುವವರ ನಡುವೆ ನಾವು ಸದಾ ಹೆಣಗಾಡುತ್ತಲೇ ಬಂದಿದ್ದೇವೆ ಎಂದು ಚಾಟಿ ಬೀಸಿದರು.

ಇದೇ ವೇಳೆ ರಾಹುಲ್ ಗಾಂಧಿಗೆ ಸವಾಲು ಹಾಕಿದ ಪ್ರಧಾನಿ ಮೋದಿ,  ನಿಮಗೆ ಸವಾಲ್ ಇದೆ. 15. ನಿಮಿಷ ಕರ್ನಾಟಕದ ಅಭಿವೃದ್ಧಿ ಗೆ ನಿಮ್ಮ ಸರ್ಕಾರ ಮಾಡಿದ ಸಾಧನೆಯನ್ನು ಹೇಳಿ. ನೀವು ಯಾವುದೇ ಭಾಷೆಯಲ್ಲಿ ಮಾತಾನಾಡಿ ಕನ್ನಡ, ಹಿಂದಿ. ಇಂಗ್ಲಿಷ್, ಅಥವಾ ನಿಮ್ಮ ತಾಯಿಯವರ ಮಾತೃಭಾಷೆಯಲ್ಲಿಯಾದರೂ ಹೇಳಿ. ಅದರಲ್ಲಿ 5 ಬಾರಿ ವಿಶ್ವೇಶ್ವರಯ್ಯ ಅವರ ಹೆಸರು  ಉಲ್ಲೇಖಿಸಿ ಇಲ್ಲಿನ ಜನ ನಿಮ್ಮನ್ನ ಮೆಚ್ಚುತ್ತಾರೆ ಎಂದು ಮೋದಿ ವ್ಯಂಗ್ಯವಾಡಿದರು.

ಕಾಂಗ್ರೆಸ್ ಹೊಸ ರಾಜಕೀಯ ಸೂತ್ರ 2+1, 1+1

ಸಿದ್ದರಾಮಯ್ಯ ಸೋಲಿನ ಭೀತಿಯಿಂದ ಓಡುತ್ತಿದ್ದಾರೆ. ಕಾಂಗ್ರೆಸ್ ನ ಹೊಸ ರಾಜಕೀಯ ಸೂತ್ರ 2+1, 1+1 ನಿಂದ ಆ ಪಕ್ಷದ ಕಾರ್ಯಕರ್ತರಿಗೆ ನೋವಾಗಿರುವುದು ಕಂಡಿದೆ. ಸಿಎಂಗೆ 2 ಮಗನಿಗೆ 1ಸಚಿವರಿಗೆ 1+1. ಕುಟುಂಬ ರಾಜಕಾರಣದ ಹೊಸ ಮಜಲು ಕರ್ನಾಟಕದಲ್ಲಿ ಆರಂಭವಾಗಿದೆ.  ವಂಶ ರಾಜಕಾರಣದಿಂದ ಇವರು ದೇಶ ಹಾಳು ಮಾಡಿದರು. ಪ್ರಜಾಪ್ರಭುತ್ವ ಹಾಳು ಮಾಡಿದರು. ಇದರ ವಿರುದ್ಧ ನಮ್ಮ ಹೋರಾಟ ಎಂದು ಕರೆ ನೀಡಿದರು. ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ನಾಶವಾಗಿದ್ದು. ಯಾರಿಗೂ ರಕ್ಷಣೆಯಿಲ್ಲ. ಲೋಕಾಯುಕ್ತರಿಗೂ ಇಲ್ಲ. ಕರ್ನಾಟಕದ ಒಬ್ಬ ಪೋಲಿಸ್  ಅಧಿಕಾರಿ ಸಿಎಂಗೆ ಪತ್ರ ಬರೆದು ಇಲ್ಲಿ ನಮಗೇ ರಕ್ಷಣೆ ಇಲ್ಲ ಎಂದಿದ್ದರು. ಎಲ್ಲಿ ಭ್ರಷ್ಟಾಚಾರ ಇರುತ್ತದೋ ಅಲ್ಲಿ ಯಾರಿಗೂ ರಕ್ಷಣೆ ಇರಲ್ಲ ಎಂದರು.

ಚಾಮರಾಜನಗರದ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ. ಇಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳು ಇದ್ದರೂ ಅಭಿವೃದ್ಧಿ ಆಗಿಲ್ಲ. ಚಾಮರಾಜನಗರ ರೈಲು ಯೋಜನೆಗೆ ರಾಜ್ಯ ಸರ್ಕಾರ ಅಡ್ಡಿಯನ್ನುಂಟು ಮಾಡಿದೆ. ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೈವೆ ಯೋಜನೆ ನಾವು ಕೈಗೆತ್ತಿಗೊಂಡಿದ್ದೇವೆ. ಇದರಿಂದ ಅನುಕೂಲ ಎಂದರು. ನಾವು 2022 ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ. ರೈತರ ಹೊಲಗಳಿಗೆ ನೀರು ಹರಿಸಲು ನಮ್ಮ ಆದ್ಯತೆ ನೀಡುತ್ತೇವೆ. ದೇಶದಲ್ಲಿ ಈಗ 99 ನೀರಾವರಿ ಯೋಜನೆಗಳು ಚಾಲ್ತಿಯಲ್ಲಿವೆ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಕರ್ನಾಟಕದ ವಿಕಾಸದ ಹಾದಿಯನ್ನು ಹದಗೆಡಿಸಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಲಾಭ ಕರ್ನಾಟಕದ ರೈತರಿಗೆ ಹೆಚ್ಚು ಸಿಕ್ಕಿದೆ.  ವಿಕಾಸದ ಹೊರತಾಗಿ ಜನರಿಗೆ ಬೇರೇನೂ ಬೇಕಿಲ್ಲ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: