ಮೈಸೂರು

ಹುಣಸೂರು ತಾಲೂಕಿನಲ್ಲಿ ಆಡಳಿತ ವಿರೋಧಿ ಅಲೆ : ಶಾಸಕ ಮಂಜುನಾಥ್ ಅವರಿಗೆ ಗ್ರಾಮಸ್ಥರಿಂದ ಘೇರಾವ್

ಮೈಸೂರು,ಮೇ.2:-  ಹುಣಸೂರು ತಾಲೂಕಿನಲ್ಲಿ ಆಡಳಿತ ವಿರೋಧಿ ಅಲೆ ಕಾಣಿಸಿಕೊಂಡಿದ್ದು, ಎರಡನೇ ಬಾರಿಗೆ ಶಾಸಕ ಮಂಜುನಾಥ್ ಅವರಿಗೆ ಗ್ರಾಮಸ್ಥರು ಘೇರಾವ್ ಹಾಕಿದ ಘಟನೆ ನಡೆದಿದೆ.

ಹುಣಸೂರು ತಾಲೂಕಿನ ಬೂಚನಹಳ್ಳಿ ಗ್ರಾಮದಲ್ಲಿ  ಮತಯಾಚನೆಗೆ ತೆರಳಿದ್ದಾಗ  ಗ್ರಾಮಸ್ಥರು ಶಾಸಕರನ್ನು ಗ್ರಾಮದ ಒಳಗೆ ಸೇರಿಸದೇ ಅವರಿಗೆ ಘೇರಾವ್ ಹಾಕಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ  ಶಾಸಕರ ಎದುರಲ್ಲೇ ಜೆಡಿಎಸ್ ಗೆ ಜೈಕಾರ ಹಾಕಿದ್ದಾರೆ ಎನ್ನಲಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡ ಅವರಿಗೆ ಜೈಕಾರ ಕೂಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಕೂಡ  ಕಚುವಿನಹಳ್ಳಿ ಗ್ರಾಮದ ಜನತೆ ಶಾಸಕರಿಗೆ ಘೇರಾವ್ ಹಾಕಿದ್ದರು ಎನ್ನಲಾಗಿದೆ. ಈ ವೇಳೆ ಶಾಸಕರು ವ್ಯಕ್ತಿಯೋರ್ವನ ಕತ್ತಿನ ಪಟ್ಟಿ ಹಿಡಿದು ತಳ್ಳಿದ್ದರು. ಇಂದು ಕೂಡ ಬೂಚನಹಳ್ಳಿಯಲ್ಲಿ  ಘಟನೆ ಮರುಕಳಿಸಿದ್ದು, ಇದರಿಂದ ಶಾಸಕ‌ ಮಂಜುನಾಥ್ ಕಂಗಾಲಾಗಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: