ದೇಶ

ಮೊಣಕೈ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ನಟ ಅಜಯ್ ದೇವಗನ್

ದೇಶ(ನವದೆಹಲಿ)ಮೇ.2:- ಬಾಲಿವುಡ್ ನಟ ಅಜಯ್ ದೇವಗನ್ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಂತ. ಹೀಗೆಂದು ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ. ಅನಾರೋಗ್ಯ ಪರಿಸ್ಥಿತಿಯಲ್ಲಿಯೂ  ಲವ್ ರಂಜನ್ ನವರ ಟೋಟಲ್ ಧಮಾಲ್ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರಂತೆ.

ಅವರು ಮೊಣಕೈ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಕೆಲವೊಮ್ಮೆ ಕಾಫಿ ಕಪ್ ಹಿಡಿದುಕೊಳ್ಳುವುದೂ ಕಷ್ಟವಾಗುತ್ತಿದೆಯಂತೆ. ಚಿತ್ರಗಳಿಗೆ ಒಪ್ಪಂದ ಮಾಡಿಕೊಂಡ ಕಾರಣ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. ನಿರ್ಮಾಪಕರು ಈಗಾಗಲೇ ಇತರ ನಟರೊಂದಿಗೆ ದಿನಾಂಕ ನಿಗದಿ ಪಡಿಸಿರುವುದೇ ಚಿತ್ರೀಕರಣದಿಮದ ಬ್ರೇಕ್ ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ‘ತಾನಾಜಿ-ದಿ ಅನ್ ಸಂಗ್ ಯೋಧ್’ ಚಿತ್ರದ ತಯಾರಿಯನ್ನೂ ನಡೆಸಿದ್ದಾರಂತೆ. ಅಷ್ಟೇ ಅಲ್ಲದೇ ನಟಿ ಟಬು ಅವರೊಂದಿಗೆ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದು, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರಂತೆ ಅಭಿಮಾನಿಗಳು. (ಎಸ್.ಎಚ್)

Leave a Reply

comments

Related Articles

error: