ಸುದ್ದಿ ಸಂಕ್ಷಿಪ್ತ
ಮಹಾರಾಣಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ
ಮೈಸೂರು,ಮೇ.2 : 2017-18ನೇ ಸಾಲಿನ ಪಿಯುಸಿ ಫಲಿತಾಂಶದಲ್ಲಿ ಮಹಾರಾಣಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಶೇ.71.32, ವಾಣಿಜ್ಯ ಶೇ. 91.02, ಹಾಗೂ ಕಲಾ ಶೇ 80.72 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ..
ವಿಜ್ಞಾನ ವಿಭಾಗದಲ್ಲಿ ಆರ್. ರಕ್ಷಿತ 560, ಎಂ.ವಿ.ರೋಷಿನಿ 556, ಆರ್.ಛಾಯಾ 538 ಹಾಗೂ ರಂಜಿತಾ 538 ಅಂಕ ಗಳಿಸಿದ್ದಾರೆ.
ಅದರಂತೆ ಕಲಾ ವಿಭಾಗದಲ್ಲಿಯೂ ಸುರಭಿ ಶ್ರೀನಿವಾಸ 541, ದೀಪು 531, ಎಂ.ಕಾವ್ಯ 524 ಪಡೆದಿದ್ದಾರೆ. ಇವರ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಹಾಗೂ ಅಧ್ಯಾಪಕ ವೃಂದವು ಶುಭ ಹಾರೈಸಿದೆ. (ಕೆ.ಎಂ.ಆರ್)