ಮೈಸೂರು

ವಿದ್ಯುತ್ ಕಂಬ ಏರಿದ ಚೆಸ್ಕಾಂ ಮಾಜಿ ನೌಕರನಿಗೆ ವಿದ್ಯುತ್ ಶಾಕ್ : ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು

ಮೈಸೂರು,ಮೇ.3:- ವಿದ್ಯುತ್ ಕಂಬ ಏರಿದ ಚೆಸ್ಕಾಂ ಮಾಜಿ ನೌಕರನಿಗೆ ವಿದ್ಯುತ್ ಶಾಕ್  ತಗುಲಿದ ಘಟನೆ ಉಯಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಉಯಿಗೊಂಡನಹಳ್ಳಿ ಗ್ರಾಮದಲ್ಲಿ ಮಾಜಿ ಗುತ್ತಿಗೆ ನೌಕರ ಶಿವಕುಮಾರ್ ವಿದ್ಯುತ್ ಕಂಬ ಏರಿದ್ದರು. ಗ್ರಾಮದಲ್ಲಿ ವಿದ್ಯುತ್ ಇಲ್ಲದ ಕಾರಣ ಚೆಸ್ಕಾಂ ಸಿಬ್ಬಂದಿ ಪುಟ್ಟರಾಜು ಪರಿಶೀಲನೆಗೆ ಆಗಮಿಸಿದ್ದರು. ಈ ವೇಳೆ ತಾನು ಕಂಬ ಹತ್ತುವ ಬದಲು ಶಿವಕುಮಾರ್‌ ಅವರನ್ನು ಹತ್ತಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಶಿವಕುಮಾರ ಗುತ್ತಿಗೆ ಅವಧಿ 3 ತಿಂಗಳ ಹಿಂದೆಯೇ ಮುಗಿದಿತ್ತಾದರೂ ಸಹಾಯಕ್ಕೆಂದು ಶಿವಕುಮಾರ್ ಅವರನ್ನು ಕರೆದುಕೊಂಡು ಹೋಗಿದ್ದರು. ದುರಸ್ತಿ ಮಾಡುವ ವೇಳೆ ಶಿವಕುಮಾರ್‌ಗೆ ವಿದ್ಯುತ್ ಶಾಕ್ ತಗುಲಿ ಕಂಬದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಕೂಡಲೇ ಗ್ರಾಮಸ್ಥರು ಸಹಾಯಕ್ಕೆ ಆಗಮಿಸಿದ್ದು, ಕಂಬದಿಂದ ಇಳಿಸಿ ಹುಣಸೂರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: