ಮೈಸೂರು

ಮೈಸೂರು ವಿವಿ ಹಂಗಾಮಿ ಕುಲಪತಿಗಳಾಗಿ ಡಾ.ನಿಂಗಮ್ಮ ಸಿ ಬೆಟ್ಸೂರ್

ಮೈಸೂರು,ಮೇ.3:- ಮೈಸೂರು ವಿಶ್ವವಿದ್ಯಾನಿಲಯದ ನೂತನ ಹಂಗಾಮಿ ಕುಲಪತಿಗಳಾಗಿ ಡಾ.ನಿಂಗಮ್ಮ ಸಿ ಬೆಟ್ಸೂರ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.

ಈ ಹಿಂದೆ ಹಂಗಾಮಿ ಕುಲಪತಿಗಳಾಗಿದ್ದ ಪ್ರೊ.ಸಿ.ಬಸವರಾಜು ಅವರ ಅವಧಿ ಮೇ 2 ರಂದು ಪೂರ್ಣಗೊಂಡ ಹಿನ್ನೆಲೆಯಲ್ಲಿ ಶೈಕ್ಷಣಿಕ ವಿಭಾಗದ ಡೀನ್ ಡಾ.ನಿಂಗಮ್ಮ ಸಿ ಬೆಟ್ಸೂರ್ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶಿಸಿದ್ದರು. ಅದರಂತೆ ಅವರು ಇಂದು ಹಂಗಾಮಿ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: