ಪ್ರಮುಖ ಸುದ್ದಿ

ತಿರಿಪುರಾ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಗ್ರಾಹಕರಿಗೆ ವಂಚನೆ

ರಾಜ್ಯ(ಬೆಂಗಳೂರು)ಮೇ.3:- ರಾಜಧಾನಿ ಬೆಂಗಳೂರಿನಲ್ಲಿ 13‌ ಬ್ರಾಂಚ್ ಗಳನ್ನು ಹೊಂದಿದ್ದ ತ್ರಿಪುರಾ ಮೂಲದ ಚಿಟ್​ಫಂಡ್ ಕಂಪನಿ ಕೋಟ್ಯಂತರ ರೂ ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ರಾಜ್ಯಾದ್ಯಂತ 34 ಶಾಖೆಗಳಿರುವ ತಿರಿಪುರಾ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಚಿಟ್ ಫಂಡ್ ಕಂಪನಿ ಮಲ್ಲೇಶ್ವರಂ, ಬಾಣಸವಾಡಿ, ದಾಸರಹಳ್ಳಿ ಸೇರಿ 13 ಶಾಖೆಗಳನ್ನು ಹೊಂದಿದ್ದು, ಒಟ್ಟು 250 ಕೋಟಿ ರೂ. ಗೂ ಹೆಚ್ಚು ಹಣ ವಂಚಿಸಿದೆ ಎಂದು ತಿಳಿದುಬಂದಿದೆ. ಈ ಕಂಪನಿಯಲ್ಲಿ 20 ಸಾವಿರಕ್ಕೂ ಹೆಚ್ಚು ಗ್ರಾಹಕರು ಹಣ ತೊಡಗಿಸಿದ್ದರು. ಕಂಪನಿ ನಿಯಮದ ಪ್ರಕಾರ ಗ್ರಾಹಕರು ಅವರ ಸಾಮರ್ಥ್ಯದ ಮೇಲೆ 20 ತಿಂಗಳು ಹಣ ಕಟ್ಟಬೇಕಿತ್ತು.

ತ್ರಿಪುರಾ ಚಿಟ್ ಫಂಡ್ ಐದು ತಿಂಗಳು ಗ್ರಾಹಕರಿಂದ ಹಣವನ್ನು ಕಟ್ಟಿಸಿಕೊಂಡು ತನ್ನ 13 ಬ್ರಾಂಚ್​ಗಳನ್ನು ಮುಚ್ಚಿದೆ. ಇದರಿಂದ ಮೋಸ ಹೋದ ಗ್ರಾಹಕರು, ಸಿಐಡಿ ಎಕನಾಮಿಕ್ಸ್ ಅಫೇನ್ಸ್ ಅಧಿಕಾರಿಗಳ ಸಲಹೆ ಹಿನ್ನೆಲೆಯಲ್ಲಿ ‌ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: