
ಮೈಸೂರು
ಸುಬ್ರಹ್ಮಣ್ಯ ಷಷ್ಠಿ : ಶ್ರೀವರಸಿದ್ಧಿ ಸುಬ್ರಹ್ಮಣ್ಯಸ್ವಾಮಿಗೆ ಹಾಲಿನಾಭಿಷೇಕ: ಡಿ.5ರಂದು
ನಗರದ ಬನ್ನಿಮಂಟಪದ ಬಳಿಯಿರುವ ಶ್ರೀವರಸಿದ್ಧಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿ ಸುಬ್ರಹ್ಮಣ್ಯನಿಗೆ ಹಾಲಿನಾಭಿಷೇಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಂಸ್ಥಾಪಕ ಮೈ.ನಾ.ಗೋಪಾಲಕೃಷ್ಣ ತಿಳಿಸಿದರು.
ಅವರು, ಶುಕ್ರವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.5ರಂದು ಸುಬ್ರಹ್ಮಣ್ಯಸ್ವಾಮಿಯ ಷಷ್ಠಿಯ ವಿಶೇಷ ದಿನವಾಗಿದ್ದು ಅಂದು ಮಾಡುವ ಪೂಜಾ-ವೃತಗಳು ಶೀಘ್ರದಲ್ಲಿಯೇ ಫಲ ನೀಡಲಿದ್ದು ಇಷ್ಟಾರ್ಥ ಸಿದ್ಧಿಯಾಗುವುದು. ಶ್ರೀವರಸಿದ್ಧಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಅಪರೂಪ ಹಾಗೂ ಬೃಹದಾಕಾರದ ಏಳು ಹೆಡೆ ಶೇಷಮೂರ್ತಿಗೆ ಹಾಲಿನಾಭಿಷೇಕ ಬೆಳಗ್ಗೆ 7ರಿಂದ ಸಂಜೆ 8ರವರೆಗೆ ನಡೆಯಲಿದ್ದು ಕಾರ್ಯಕ್ರಮದಲ್ಲಿ ಭಕ್ತಾದಿಗಳು ಪಾಲ್ಗೊಂಡು ಅಭಿಷೇಕ ಮಾಡಬಹುದು. ರಾತ್ರಿ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಆರತಿ ಸರ್ಮಪಿಸಲಾಗುವುದು ಎಂದು ತಿಳಿಸಿದರು.