ಸುದ್ದಿ ಸಂಕ್ಷಿಪ್ತ

ಮೇ. 7ರಿಂದ ಸುತ್ತೂರಿನಲ್ಲಿ ಅಧ‍್ಯಯನ ಶಿಬಿರ

ಮೈಸೂರು,ಮೇ.3 : ಜಗದ್ಗುರು ಶ್ರೀವೀರಸಿಂಹಾಸನ ಮಹಾಸಂಸ್ಥಾನ ಮಠ, ಸುತ್ತೂರು. ಜೆಎಸ್ಎಸ್ ಮಹಾವಿದ್ಯಾಪೀಠ, ಶ್ರೀಶಿವರಾತ್ರೀಶ್ವರ ಧಾರ್ಮಿಕ ದತ್ತಿ ವಿಭಾಗದಿಂದ ಮೇ. 7 ರಿಂದ 10ರವರೆಗೆ ಅಧ್ಯಯನ ಶಿಬಿರವನ್ನು ಸುತ್ತೂರಿನಲ್ಲಿ ಆಯೋಜಿಸಿದೆ.

ನಾಲ್ಕು ದಿನಗಳ ಕಾಲ ಜರುಗುವ ಶಿಬಿರದಲ್ಲಿ ಮಹಾಲಿಂಗರಂಗನ ಅನುಭವಾಮೃತ ಕುರಿತು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಶ್ರೀಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದ ಸಹಜಾನಂದ ಸ್ವಾಮಿಗಳು, ಇನ್ನಿತರ ಶ್ರಿಗಳು ವಿಷಯ ಮಂಡಿಸುವರು.

ಭಾಗವಹಿಸಲು ಇಚ್ಚಿಸುವವರು ಮೊ.ನಂ. 9341131811, 9945494612, 9880506091, ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: