ಸುದ್ದಿ ಸಂಕ್ಷಿಪ್ತ

ನಟನ ರಂಗ ‘ರಜಾಮಜಾ’ ಶಿಬಿರದ ಸಮಾರೋಪ

ಮೈಸೂರು,ಮೇ.3 : ಮಂಡ್ಯ ರಮೇಶ್ ನೇತೃತ್ವದಲ್ಲಿ ನಟನ ರಂಗಶಾಲೆಯಿಂದ ‘ರಜಾಮಜಾ’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಮೇ.6,7ರಂದು ಸಂಜೆ 5ಕ್ಕೆ ಕಲಾಮಂದಿರದಲ್ಲಿ ಆಯೋಜಿಸಿದೆ.

ಮೇ.6ರಂದು ಕಿರುತೆರೆ ನಟರಾದ ರವಿಶಂಕರ್, ಬಾಲಾಜಿ ಮನೋಹರ್ ಇರುವರು.

ಮೇ7ರಂದು ಮಜಾ ಟಾಕೀಸ್ ನ ನವೀನ್ ಪಡೀಲ್, ರಂಗಕರ್ಮಿ ನಾಗೇಶ್ ವಿ.ಬೆಟ್ಟಕೋಟೆ ಇವರು.

ಕಾರ್ಯಕ್ರಮದಲ್ಲಿ ಮಕ್ಕಳಿಂದ ನಾಟಕ, ರಂಗ ಹಾಗೂ ಜಾನಪದ ಗೀತೆಗಳ ಗಾಯನ, ಜಾನಪದ ಕಲೆಗಳಾದ ಕೋಲಾಟ, ಕಂಸಾಳೆ, ಸೋಲಿಗರ ಕುಣಿತ, ಡೊಳ್ಳು ಕುಣಿತ , ಸಾಹಸ ಕ್ರೀಡೆ ಪ್ರದರ್ಶನವನ್ನು ಏರ್ಪಡಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: