ಕರ್ನಾಟಕ

ನಾಗರಹೊಳೆ ಅರಣ್ಯದಲ್ಲಿ ಗಂಡುಹುಲಿ ಕಳೇಬರ ಪತ್ತೆ

ರಾಜ್ಯ(ಮಡಿಕೇರಿ) ಮೇ 3 :- ನಾಗರಹೊಳೆಯ ಹುಲಿ ಸಂರಕ್ಷಣಾ ಮೀಸಲು ಅರಣ್ಯದೊಳಗೆ ಗಂಡು ಹುಲಿಯೊಂದರ ಕಳೇಬರ ಪತ್ತೆಯಾಗಿದೆ.
ಸುಮಾರು 7ರಿಂದ 8ವರ್ಷದ ಗಂಡು ಹುಲಿಯ ಶವ ಕೊಳೆತ ಸ್ಥಿತಿಯಲ್ಲಿ ಕಾಯಿತೊಳೆಕೆರೆ ಎಂಬ ಪ್ರದೇಶದಲ್ಲಿ ದೊರೆತ್ತಿದ್ದು, ಸುಮಾರು 10 ದಿನಗಳ ಹಿಂದೆ ಸಾವನ್ನಪ್ಪಿರುವ ಬಗ್ಗೆ ಅರಣ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ಮುಜೀಬ್ ಅವರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ದಹನ ಮಾಡಲಾಯಿತು.
ಅರಣ್ಯ ಇಲಾಖೆಯ ಮಾಹಿತಿಯಂತೆ ಹುಲಿ ಸಹಜವಾಗಿ ಸಾವನ್ನಪ್ಪಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: