
ಮೈಸೂರು
ದಾಖಲೆಯಿಲ್ಲದೇ ಸಾಗಿಸುತ್ತಿದ್ದ 5ಲಕ್ಷ ರೂ.ಜಪ್ತಿ
ಮೈಸೂರು,ಮೇ.4:- ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಝಣ ಝಣ ಕಾಂಚಾಣ ಸದ್ದು ಮಾಡುತ್ತಿದ್ದು, ದಾಖಲೆ ಇಲ್ಲದ 5 ಲಕ್ಷ ರೂ. ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಮೈಸೂರು ಹುಣಸೂರು ರಸ್ತೆಯಲ್ಲಿ ನಡೆಯುತ್ತಿದ್ದ ತಪಾಸಣೆ ವೇಳೆ ಮೈಸೂರಿನ ಮೈದನಹಳ್ಳಿ ತಪಾಸಣಾ ಕೇಂದ್ರದಲ್ಲಿ ಹಣ ಜಪ್ತಿ ಮಾಡಲಾಗಿದ್ದು, ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಟ್ಟು 5,42,220 ರೂ ಹಣ ವಶಕ್ಕೆ ಪಡೆದಿದ್ದಾರೆ. ಶ್ರೀನಿವಾಸ್ ಎಂಬವರು ದಾಖಲೆಯಿಲ್ಲದ ಹಣವನ್ನು ಸಿ.ಟಿ 100ಬೈಕ್ನಲ್ಲಿ ಕೊಂಡೊಯ್ಯುತ್ತಿದ್ದರು. ಅಭಿಷೇಕ್ ಡಿಸ್ಕವರ್ ಬೈಕ್ನಲ್ಲಿ ಹಣ ಸಾಗಿಸುತ್ತಿದ್ದರು ಎನ್ನಲಾಗಿದ್ದು, ಇವರಿಬ್ಬರೂ ಕೊಂಡೊಯ್ಯುತ್ತಿದ್ದ ಹಣಕ್ಕೆ ಯಾವುದೇ ದಾಖಲೆಯಿರಲಿಲ್ಲ ಎನ್ನಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)