ಕರ್ನಾಟಕ

ಮೇಲುಕೋಟೆ ವಿಧಾನಸಭಾ ಕ್ಷೇತ್ರ: ಅಭ್ಯರ್ಥಿಗಳಿಂದ ಪ್ರಮಾಣ ಪತ್ರ ಸಲ್ಲಿಕೆ

ಮಂಡ್ಯ (ಮೇ 2): ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ 13 ಅಭ್ಯರ್ಥಿಗಳು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸರ್ಕಾರಕ್ಕೆ ಇವರಿಂದ ಯಾವುದೇ ಬಾಕಿ ಇರುವುದಿಲ್ಲವೆಂದು ತಿಳಿಸಿರುತ್ತಾರೆ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹೆಚ್.ಪಿ.ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನತಾದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು, ಭಾರತೀಯ ಜನತಾ ಪಕ್ಷದ ಆಭ್ಯರ್ಥಿ ಸುಂಡಹಳ್ಳಿ ಸೋಮಶೇಖರ, ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ, ಜನ ಸಾಮಾನ್ಯರ ಪಾರ್ಟಿ ಅಭ್ಯರ್ಥಿ ಮಹೇಶ, ಎ.ಐ.ಎಂ.ಇ.ಪಿ ಪಕ್ಷದ ಅಭ್ಯರ್ಥಿ ಮಹೇಶ್, ಕರ್ನಾಟಕ ಜನತಾ ಪಕ್ಷದ ಆಭ್ಯರ್ಥಿ ಜಿ.ಎಂ.ರಮೇಶ್, ಸಮಾಜವಾದಿ ಪಕ್ಷದ ಆಭ್ಯರ್ಥಿ ರೋಹಿಣಿ, ಪಕ್ಷೇತರ ಆಭ್ಯರ್ಥಿಗಳಾದ ಅರುಣ್ ಕುಮಾರ್, ಕೆ.ಎಸ್.ದರ್ಶನ್, ಹೆಚ್.ನಾರಯಣ, ಪುಟ್ಟರಾಜು, ಬಿ.ಕೆ.ಪುಟ್ಟರಾಜು ಹಾಗೂ ಡಿ.ಕೆ.ರವಿಕುಮಾರ್ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಎಂದು ಪ್ರಕಟಣೆ ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: