ಮೈಸೂರು

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಉದ್ಘಾಟಿಸಲಿರುವ ಓಂಪುರಿ : ರಂದೀಪ್

ರಂಗಾಯಣದಲ್ಲಿ ಜನವರಿ 13ರಿಂದ 18ರವರೆಗೆ ನಡೆಯಲಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಬಾಲಿವುಡ್ ನ ಖ್ಯಾತ ಚಲನಚಿತ್ರ ನಟ ಓಂಪುರಿ ಉದ್ಘಾಟಿಸಲಿದ್ದಾರೆ.

ಮೈಸೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಡಿ.ರಂದೀಪ್ ಮಾಹಿತಿ ನೀಡಿದರು. ರಂಗಾಯಣದಲ್ಲಿ ನಡೆಯಲಿರುವ ಆರು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ನಾಲ್ಕು ಅಂತಾರಾಷ್ಟ್ರೀಯ ತಂಡಗಳು ಪ್ರದರ್ಶನ ನೀಡಲಿದ್ದು, ಓಂಪುರಿಯವರನ್ನು  ಉದ್ಘಾಟನೆಗಾಗಿ ಆಮಂತ್ರಿಸಲಾಗಿದೆ ಎಂದರು. ಶ್ರೀಲಂಕಾ, ಪೋಲಾಂಡ್, ಬಾಂಗ್ಲಾದೇಶ, ಉಜ್ಬೇಕಿಸ್ತಾನ್ ಗಳು ಕ್ರಮವಾಗಿ ಸೆಕ್ಕುವಾ, ಬ್ಯಾಡ್ ಸಿಟಿ, ಅಮೀನಾ ಸುಂದರಿ, ಮೀಡಿಯಾ ಗಳನ್ನು ಪ್ರದರ್ಶಿಸಲಿವೆ. ಅಷ್ಟೇ ಅಲ್ಲದೇ ಭಾರತದ ಭೋಜ್ಪುರಿ,  ಕಾಶ್ಮೀರಿ, ಹಿಂದಿ, ಮಲಯಾಳಂ, ಸಂಸ್ಕೃತ್, ಬೆಂಗಾಲಿ, ಓಡಿಸ್ಸಾ ಕಲಾವಿದರೂ ಕೂಡ ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ರಂಗಾಯಣವು ಈ ಬಾರಿ ರಂಗಸಂಗೀತ ಶೀರ್ಷಿಕೆಯಡಿ ಜಾನಪದ ಸಂಗೀತ ಕಾರ್ಯಕ್ರಮವನ್ನು  ಆಯೋಜಿಸಿದ್ದು, ರಂಗಾಯಣದ ಆವರಣದಲ್ಲಿ ನಡೆಲಿದೆ. 60 ಕರಕುಶಲ ಮಳಿಗೆಗಳು ಇಲ್ಲಿ ತಲೆ ಎತ್ತಲಿವೆ ಎಂದರು.

ರಂಗಾಯಣದ ಉಪನಿರ್ದೇಶಕಿ ನಿರ್ಮಲಾ ಮಠಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಉಪಸ್ಥಿತರಿದ್ದರು.

Leave a Reply

comments

Related Articles

error: