ದೇಶಪ್ರಮುಖ ಸುದ್ದಿ

ಪ್ರಧಾನಿ ಭಾವಚಿತ್ರ ಜಾಹೀರಾತಿಗೆ ಬಳಕೆ: ರಿಲಯನ್ಸ್ ಜಿಯೋಗೆ ಭಾರಿ ದಂಡ!

ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಸಂಸ್ಥೆಯೂ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರಗಳನ್ನು ಕಂಪನಿಯ ಜಾಹೀರಾತಿಗಾಗಿ ಬಳಸಿದಕ್ಕೆ ಕಂಪನಿಗೆ ಭಾರಿ ದಂಡವನ್ನು ವಿಧಿಸಲಾಗಿದೆ.

ದಂಡದ ಮೊತ್ತವನ್ನು ನೀವೊಮ್ಮೆ ಕೇಳಿದರೆ ಆಶ್ಚರ್ಯಚಕಿತರಾಗಬಹುದು. ಪ್ರಧಾನಿ ಭಾವಚಿತ್ರ ಬಳಸಿದ್ದಕ್ಕೆ ಲಾಂಛನ ಮತ್ತು ಹೆಸರು ದುರ್ಬಳಕೆ ತಡೆ ಕಾಯಿದೆಯಡಿ 500 ರೂಪಾಯಿ ದಂಡವನ್ನು ಸಂಸ್ಥೆಗೆ ವಿಧಿಸಿ ಆದೇಶ ಹೊರಡಿಸಿದೆ.

ರಿಲಯನ್ಸ್ ಜಿಯೋ ಪ್ರಧಾನಿ ನರೇಂದ್ರ ಮೋದಿಯವರ ಫೋಟೋಗಳನ್ನು ತನ್ನ ಕಂಪನಿ ಜಾಹೀರಾತುಗಳಿಗೆ ಬಳಸಿರುವ ಬಗ್ಗೆ ಸರ್ಕಾರಕ್ಕೆ ತಿಳಿದಿತ್ತು. ನೋಟು ಅಮಾನ್ಯವಾದ ನಂತರ ಕಂಪನಿಯ ಪೇಟಿಎಂ ಜಾಹೀರಾತಿಗೆ ಪ್ರಧಾನಿಯವರ ಭಾವಚಿತ್ರ ಬಳಲಾಗಿತ್ತು.

ಪ್ರಧಾನಿಯವರ ಫೋಟೋಗಳನ್ನು ಖಾಸಗಿ ಕಂಪನಿಯವರು ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಬಳಸಿರುವ ಬಗ್ಗೆ ಲೋಕಸಭೆಯಲ್ಲಿ ವಿಪಕ್ಷಗಳು ಭಾರೀ ಕೋಲಾಹಲವನ್ನೆಬ್ಬಿಸಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ವಾರ್ತಾ ಮತ್ತು ಪ್ರಸಾರ ಖಾತೆಯ ಸಹಾಯಕ ಸಚಿವ ರಾಜವರ್ಧನ ಸಿಂಗ್ ರಾಥೋರ್, ಪ್ರಧಾನಿ ಚಿತ್ರಗಳನ್ನು ಜಾಹೀರಾತುಗಳಿಗೆ ಬಳಸಲು ಅನುಮತಿ ನೀಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಅಕ್ರಮವಾಗಿ ಹೆಸರು ಬಳಸುವವರಿಗೆ “ಲಾಂಛನ ಮತ್ತು ಹೆಸರುಗಳ ದುರ್ಬಳಕೆ ತಡೆ ಕಾಯ್ದೆ” ಅಡಿ ಭಾರತದಲ್ಲಿ ವಿಧಿಸುವ ದಂಡ ಮೊತ್ತ ತೀರಾ ನಗಣ್ಯ.

Leave a Reply

comments

Related Articles

error: