ಮೈಸೂರು

ಮಕ್ಕಳ ಅಪಹರಣ – ಲೈಂಗಿಕ ದೌರ್ಜನ್ಯ ಸಮಾಜಕ್ಕೆ ಕಪ್ಪುಚುಕ್ಕೆ: ಡಿ. ರಂದೀಪ್

ಮಕ್ಕಳ ಅಪಹರಣ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿದ್ದು ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಇವೆರಡೂ ಸಮಾಜಕ್ಕೆ ಕಪ್ಪು ಚುಕ್ಕೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಯುಒಎಂ-ಮಾನಸ ಗಂಗೋತ್ರಿಯ ಗಡಿಯಾರ ಗೋಪುರದ ಬಳಿ  ಯಂಗ್ ಇಂಡಿಯನ್ಸ್, ಸಿಐಐ ಮತ್ತು ರೋಟರಿ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಮಕ್ಕಳ ಸುರಕ್ಷತೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಅರಿವು ಕುರಿತ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಿ.ರಂದೀಪ್ ಮಾತನಾಡಿದರು.

ದೇಶದಲ್ಲಿ ಮಕ್ಕಳ ಅಪಹರಣ, ಲೈಂಗಿಕ ದೌರ್ಜನ್ಯ ತಡೆಗೆ ಎಷ್ಟೇ ಕಾನೂನುಗಳಿದ್ದರೂ ನಾವದನ್ನು ತಡೆಯುವಲ್ಲಿ ವಿಫಲರಾಗಿದ್ದೇವೆ ಎಂದರು. ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯವನ್ನು ನೀಡುವ ಮೂಲಕ ಅವರಲ್ಲಿ ದೈಹಿಕ ಮತ್ತು ಮಾನಸಿಕ ಸ್ಥಿರತೆಯನ್ನು ಹೆಚ್ಚಿಸಬೇಕು ಎಂದು ತಿಳಿಸಿದರು. ಮಕ್ಕಳಲ್ಲಿ ಪ್ರೀತಿಪೂರ್ವಕ ಕಾಳಜಿ ಹಾಗೂ ಧೈರ್ಯ ತುಂಬಿದಾಗ ಇಂತಹ ಸಮಸ್ಯೆಗಳನ್ನು ನಿವಾರಿಸುವುದರ ಜೊತೆ ರಾಷ್ಟ್ರವನ್ನೂ ಅಭಿವೃದ್ಧಿ ಪಡಿಸಬಹುದು ಎಂದರು.

ಯಂಗ್ ಇಂಡಿಯನ್ ಅಧ್ಯಕ್ಷೆ ರಮ್ಯ ಬೋಪಣ್ಣ ಮಾತನಾಡಿ ಮಕ್ಕಳ ಅಪಹರಣ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ದೇಶದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಅದರಿಂದ ಜನರಲ್ಲಿ ಈ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಮಾನವ ಸರಪಳಿಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

Leave a Reply

comments

Related Articles

error: