ಸುದ್ದಿ ಸಂಕ್ಷಿಪ್ತ
ಡಿಸೆಂಬರ್ 5: ಸಾವಯವ ಕೃಷಿ ಕ್ಷೇತ್ರೋತ್ಸವ
ಡಿಸೆಂಬರ್ 5ರಂದು ಬೆಳಿಗ್ಗೆ 10ಗಂಟೆಗೆ ಪಾಂಡವಪುರದ ಕೆನ್ನಾಳು ಗ್ರಾಮದಿಂದ ಕಡತನಾಳು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಸಾವಯವ ಕೃಷಿಕ ಸುಪ್ರೀತ್ ಅವರ ಜಮೀನಿನಲ್ಲಿ ಸಾವಯವ ಕೃಷಿ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಲಿದೆ.
ಅಮೇರಿಕಾದಲ್ಲಿ ಇಂಜಿನಿಯರ್ ಆಗಿರುವ ಸುಪ್ರೀತ್ ತಮ್ಮ ಐದು ಎಕರೆ ಜಮೀನಿನಲ್ಲಿ ಜಿಲ್ಲೆಯ ಸಾವಯವ ಕೃಷಿಕರ ಸಂಘದ ಮಾರ್ಗದರ್ಶನದಲ್ಲಿ ವಿವಿಧ ನಾಟಿ ತಳಿಯ ಭತ್ತವನ್ನು ಸಾವಯವ ಕೃಷಿ ಮೂಲಕ ಯಾವುದೇ ರೋಗರುಜಿನವಿಲ್ಲದೇ ಫಲವತ್ತಾಗಿ ಬೆಳೆದಿದ್ದಾರೆ.
ತಾಲೂಕಿನ ಎಲ್ಲಾ ರೈತರು ಸಾವಯವ ಕೃಷಿ ಅಳವಡಿಸಿಕೊಂಡು ಆರೋಗ್ಯಪೂರ್ಣ ಸತ್ವಯುತ ಆಹಾರ ಬೆಳೆಯಲು ಪ್ರೋತ್ಸಾಹಿಸುವ ಉದ್ದೇಶದಿಂದ ಕ್ಷೇತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನ ಸಹಜ ಸಮೃದ್ಧಿ ನಾಟಿ ಬೀಜಗಳ ಮಾರಾಟಗಾರ ಕೃಷ್ಣಪ್ರಸಾದ್, ಬಯಲು ಸೀಮೆ ಸಾವಯವ ಬೆಳೆಗಾರರ ಸಂಘದ ಶಿವಳ್ಳಿ ಬೋರೇಗೌಡ, ಸಾವಯವ ಕೃಷಿಕ ಹಾವೇರಿ ಜಿಲ್ಲೆ ರಾಣಿ ಬೆನ್ನೂರಿನ ಸಚಿನ್ ಕಬ್ಬೂರು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.