ಕ್ರೀಡೆ

ಐಪಿಎಲ್ ಚಿಯರ್ ಅಪ್ ನಲ್ಲಿರುವ ಈ ಹುಡುಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದಾಳೆ , ಯಾರವಳು..?

ಮುಂಬೈ,ಮೇ 5-ಐಪಿಎಲ್ ಹವಾ ಎಲ್ಲೆಡೆ ಜೋರಾಗಿದೆ. ಐಪಿಎಲ್ ಸರಣಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಸ್ಥಾನದಲ್ಲಿದೆ.

ಚೆನ್ನೈ ಮತ್ತು ಆರ್ ಸಿಬಿ ತಂಡದ ಕ್ಯಾಪ್ಟನ್ ಗಳು ಮ್ಯಾಚ್ ನಡೆಯುವಾಗ ಅವರ ಪತ್ನಿಯರಿದ್ದರೆ ಫುಲ್ ಎನರ್ಜಿಯಿಂದ ಆಡುತ್ತಾರೆ. ಇದೆಲ್ಲದರ ನಡುವೆ ಚೆನ್ನೈ ತಂಡ ಎಲ್ಲಿ ಪಂದ್ಯವಾಡಿದರೂ ತಂಡವನ್ನು ಚಿಯರ್ ಅಪ್ ಮಾಡಲು ಅಲ್ಲಿ ಒಬ್ಬಳು ಹುಡುಗಿ ಇದ್ದೇ ಇರುತ್ತಾಳೆ.

ಈಗ ಸಾಮಾಜಿಕ ಜಾಲತಾಣಗಳಲ್ಲಿ ಆ ಹುಡುಗಿಯದ್ದೇ ಚರ್ಚೆ ನಡೆಯುತ್ತಿದೆ. ಚೆನ್ನೈ ತಂಡವನ್ನು ಯಾವಾಗಲೂ ಚಿಯರ್ ಅಪ್ ಮಾಡುವ ಹುಡುಗಿಯ ಹೆಸರು ಮಾಲತಿ ಚಾಹರ್. ಈಕೆ ಚೆನ್ನೈ ತಂಡದ ಬೌಲರ್ ದೀಪಕ್ ಚಾಹರ್ ಸಹೋದರಿ.

ಈಕೆಯ ಮತ್ತೊಬ್ಬ ಸಹೋದರ ರಾಹುಲ್ ಚಾಹರ್ ಮುಂಬೈ ಇಂಡಿಯನ್ ತಂಡದಲ್ಲಿ ಆಡುತ್ತಿದ್ದ. ಆದ್ರೆ ಗಾಯದ ಸಮಸ್ಯೆಯಿಂದ ಈ ಸೀಸನ್ ನಲ್ಲಿ ರಾಹುಲ್ ಆಡುತ್ತಿಲ್ಲ. ಚೆನ್ನೈ ತಂಡ ಈಗಾಗಲೇ ಆಡಿರುವ 8 ಪಂದ್ಯಗಳಲ್ಲಿ 6 ಪಂದ್ಯ ಗೆಲ್ಲುವ ಮೂಲಕ 2ನೇ ಸ್ಥಾನದಲ್ಲಿದೆ. ಕೆಲ ಸಮಸ್ಯೆಗಳಿಂದ ಚೆನ್ನೈ ತನ್ನ ನೆಲದಲ್ಲಿ ಆಟವಾಡದಿದ್ದರೂ ಟಾಪ್ ನಲ್ಲಿದೆ. ಇದಕ್ಕೆಲ್ಲಾ ತಂಡಕ್ಕೆ ಜನರು ತುಂಬುವ ಉತ್ಸಾಹವೇ ಕಾರಣ.

ಆದರೆ ಮಾಲತಿ ಚಾಹರ್ ಚೆನ್ನೈ ತಂಡವನ್ನು ಚಿಯರ್ ಅಪ್ ಮಾಡೋದ್ರಲ್ಲಿ ಫಸ್ಟ್ ಲಿಸ್ಟ್ ನಲ್ಲಿದ್ದಾರೆ. ಎಲ್ಲೇ ಆಟ ನಡೆದರೂ ಅಲ್ಲಿಗೆ ಹೋಗಿ ತಂಡವನ್ನು ಹುರಿದುಂಬಿಸುತ್ತಾರೆ. ಹಾಗೆಯೇ ಈಕೆಯ ಇನ್ಸ್ಟಾಗ್ರಾಂ ತುಂಬಾ ಚೆನ್ನೈ  ತಂಡದ ಚಿತ್ರಗಳೇ ರಾರಾಜಿಸುತ್ತಿವೆ. ತನ್ನ ತಂಡದ ವೇಗದ ಬೌಲರ್ ದೀಪಕ್ ಸಹೋದರಿಯ ಈ ಉತ್ಸಾಹ, ನಾಯಕ ಧೋನಿಗೆ ತುಂಬಾ ಇಷ್ಟವಾಗುತ್ತಂತೆ. (ಎಂ.ಎನ್)

Leave a Reply

comments

Related Articles

error: