ಕರ್ನಾಟಕಮೈಸೂರು

ಬೈಲಕುಪ್ಪೆ: 25 ಸಾವಿರ ರೂ. ಮೌಲ್ಯದ ಗಂಧ ವಶ, ಇಬ್ಬರ ಬಂಧನ

ಅಕ್ರಮವಾಗಿ ಗಂಧದ ಸಾಗಣೆ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿರುವ ಬೈಲಕುಪ್ಪೆ ಪೋಲಿಸರು 2.5 ಕೆಜಿ ಗಂಧ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಬೈಲಕುಪ್ಪೆ ಗ್ರಾಮದಲ್ಲಿ ಶನಿವಾರ ನಡೆದಿದೆ, ಹಂದಿಗುಡ್ಡ ಕಾವಲಿನ ರಫೀಕ್, ಹಾಗೂ ಚಿಕ್ಕಲಕ್ಷ್ಮಣ ಎಂಬುವರೆ ಬಂಧಿತರು. ಬೈಲಕುಪ್ಪೆ ಗ್ರಾಮದ ಅರಣ್ಯಕ್ಕೆ ಹೊಂದಿಕೊಂಡಂತಹ ಹಂದಿಗುಡ್ಡ ಕಾವಲಿನ ರಸ್ತೆಯ ಅಂಚಿನಲ್ಲಿ ಗಂಧವನ್ನು ಸಾಗಿಸುವಾಗ ಸಿಕ್ಕಬಿದ್ದಿದ್ದಾರೆ. ಮಾಹಿತಿ ತಿಳಿದ ಪೋಲಿಸರು ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ ಸುಮಾರು 25 ಸಾವಿರ ರೂ. ಮೌಲ್ಯದ 2.5 ಕೆಜಿ ಗಂಧ ಮತ್ತು 1 ಆಟೋ 1 ಬೈಕ್‌ನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಎಸ್‌ಐ ಪಿ. ಲೋಕೇಶ್, ನಿಜಾಮ್ ಪಾಷ, ರಾಮೇಗೌಡ, ಸೋಮ್‌ಶೇಖರ್, ಇರ್ಫಾನ್, ಹಸೇನ್ ಅಹಮದ್, ನಂದೀಶ್, ವಿಜೇಂದ್, ಕೃಷ್ಣ, ಎನ್.ಟಿ. ಮಹದೇವ್, ಎನ್.ಡಿ. ಮಹದೇವ್, ಮಧು, ಪಾಲ್ಗೊಂಡಿದ್ದರು.

Leave a Reply

comments

Related Articles

error: