ಮೈಸೂರು

ವ್ಯಕ್ತಿಯಲ್ಲಿರುವ ಕಲೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ : ಬಿ.ಎಸ್.ಪ್ರಶಾಂತ್

ಮೈಸೂರು,ಮೇ.5:- ವ್ಯಕ್ತಿಯಲ್ಲಿರುವ ಕಲೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದುಮೈಸೂರು ಟ್ರಾವೆಲ್ಸ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ತಿಳಿಸಿದರು.

ಮೈಸೂರು ಆರ್ಟ್ ಗ್ಯಾಲರಿಯಲ್ಲಿಂದು ಬ್ಯಾಂಟರ್ ಬಾಬು ಪಬ್ಲಿಕೇಷನ್ಸ್ ವತಿಯಿಂದ ವಿಶ್ವವ್ಯಂಗ್ಯಚಿತ್ರಗಾರರ ದಿನಾಚರಣೆ ಅಂಗವಾಗಿ ಖ್ಯಾತ ವ್ಯಂಗ್ಯಚಿತ್ರಗಾರ ಹಾಗೂ ಫುಲ್ ಬ್ರೈಟರ್ ಎಂ.ವಿ.ನಾಗೇಂದ್ರ ಬಾಬು ಅವರ ವಿಶ್ವವಿಖ್ಯಾತ ವ್ಯಂಗ್ಯಭಾವ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ವ್ಯಂಗ್ಯ ಚಿತ್ರಕಲೆ ರಾಜರ ಕಾಲದಿಂದಲೇ ಬಂದಿದ್ದು, ಈ ಕುರಿತು ಸಂಶೋಧನೆ ನಡೆಸಿ ಜನರಿಗೆ ತಿಳಿಸುವಂಥಹದ್ದು ತುಂಬ ಇದೆ. ಹಳೆಯದನ್ನು ಉಳಿಸಿಕೊಂಡು ಬಂದಿದ್ದು ವ್ಯಂಗ್ಯವಾಗಿ ಬೇರೆಯವರಿಗೆ ಪ್ರದರ್ಶನವನ್ನು ಮಾಡುತ್ತಿರುವುದು ಸಂತಸದ ವಿಷಯ. ಪ್ರತಿದಿನ ಮೊದಲು ಪೇಪರ್ ತೆರೆದಾಗ ಪೇಪರ್ ನಲ್ಲಿ ಏನಿದೆ ಎಂಬುದನ್ನು ಪುಟ್ಟ ಕಾರ್ಟೂನ್ ತಿಳಿಸಿಕೊಡುತ್ತದೆ. ಸಮಯದ ಅಭಾವದ ಹಿನ್ನೆಲೆಯಲ್ಲಿ ಸಮಗ್ರ ಸುದ್ದಿಯನ್ನು ಓದಲು ಸಾಧ್ಯವಾಗದ ವೇಳೆ ಈ ಕಾರ್ಟೂನ್ ನೋಡಿದರೆ ಅದರಲ್ಲಿರುವುದನ್ನು ಅರ್ಥ ಮಾಡಿಕೊಳ್ಳಬಹುದು ಎಂದರು. ಬಾಬು ಅವರು ದಿನನಿತ್ಯ ಒಂದು ಕಾರ್ಟೂನ್ ಮಾಡುತ್ತಿದ್ದಾರೆಂದರೆ ಅಂತಹ ಶಕ್ತಿ ಎಲ್ಲರಿಗೂ ಇರಲು ಸಾಧ್ಯವಿಲ್ಲ. ಯೋಗದಲ್ಲಿ 50,000ಜನರು ಸೇರಿ ಗಿನ್ನೆಸ್ ದಾಖಲಾದಾಗ ಅದರಲ್ಲಿ ನಾನೂ ಒಬ್ಬ ಎಂದು ಹೆಮ್ಮೆ ಪಟ್ಟರೆ, ಕಾರ್ಟೂನ್ ನಲ್ಲಿ ಅವರೇ ಗಿನ್ನೆಸ್ ದಾಖಲೆ ನಿರ್ಮಿಸಿರುವುದು ನಿಜಕ್ಕೂ ಶ್ಲಾಘನೀಯ. ಇಂಥಹವರು ಮೈಸೂರಿಗೆ ಆಸ್ತಿ.ಇಂಥಹವರನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಹೊರದೇಶಗಳಲ್ಲಿ ಇಂತಹ ಪ್ರದರ್ಶನಗಳಿವೆ ಎಂದರೆ ಖಂಡಿತ ಹಿಂಜರಿಯದೇ ಮುನ್ನುಗ್ಗಿ ನಿಮ್ಮ ಹಿಂದೆ ನಾವಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಮಾಜಸೇವಕ ಡಾ.ಕೆ.ಎಸ್. ರಘುರಾಂ ವಾಜಪೇಯಿ, ಶಿಲ್ಪ ಕಲಾವಿದ ಎಲ್ ಶಿವಲಿಂಗಪ್ಪ,ಸಂಶೋಧಕ ಕೆ.ಆರ್.ಯೋಗಾನರಸಿಂಹನ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: