ಸುದ್ದಿ ಸಂಕ್ಷಿಪ್ತ
ಉಚಿತ ಸಾಮೂಹಿಕ ವಿವಾಹ
ಸುತ್ತೂರು ಶ್ರೀಕ್ಷೇತ್ರದಲ್ಲಿ 2017ರ ಜ.24ರಿಂದ 29ರವರೆಗೆ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಜರುಗಲಿದೆ. ಜ.25ರಂದು ಉಚಿತ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿದೆ. ವಧುವಿಗೆ ಸೀರೆ, ಕುಪ್ಪಸ, ಕಾಲುಂಗುರ ಹಾಗೂ ಮಾಂಗಲ್ಯ, ವರನಿಗೆ ಪಂಚೆ, ವಲ್ಲಿ ಹಾಗೂ ಷರ್ಟ್ ಇವುಗಳನ್ನು ನೀಡಲಾಗುತ್ತದೆ. ವಿವಾಹವಾಗಬಯಸುವವರು ನಿಗದಿತ ಅರ್ಜಿಯನ್ನು ಪಡೆದು ಅಗತ್ಯ ದಾಖಲಾತಿಗಳನ್ನು ನೀಡಿ 2017ರ ಜ.15ರವರೆಗೂ ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಆರ್.ಕುಮಾರಸ್ವಾಮಿ-9448674702, ಜಾತ್ರಾ ಕಾರ್ಯಾಲಯ 0821-2548212 ಅನ್ನು ಸಂಪರ್ಕಿಸಬಹುದು.