ಪ್ರಮುಖ ಸುದ್ದಿ

ವಿಧಾನಸಭಾ ಚುನಾವಣೆಯ ಪ್ರಚಾರದ ಬಳಿಕ ನೇಪಾಳಕ್ಕೆ ತೆರಳಲಿದ್ದಾರಂತೆ ಮೋದಿ

ದೇಶ(ನವದೆಹಲಿ)ಮೇ.5:- ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇಪಾಳಕ್ಕೆ ಭೇಟಿ ನೀಡಲಿದ್ದಾರಂತೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೈಲಾಶ್ ಮನಸ ಸರೋವರ ಯಾತ್ರೆ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಮೇ.11 ಮತ್ತು 12ರಂದು ನೇಪಾಳಕ್ಕೆ ಭೇಟಿ ನೀಡಲಿದ್ದು, ಜನಕಪುರ ಧಾಮ್ , ಮುಕ್ತನಾಥ್ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಮೋದಿಯವರು ತಮ್ಮ ನೇಪಾಳದ ಭೇಟಿಯಲ್ಲಿ ಮೊದಲು ಸೀತಾಮಾತೆಯ ಜನ್ಮಸ್ಥಳವೆಂದು ಕರೆಯಲಾಗುವ ಜನಕಪುರದಿಂದ ಆರಂಭಿಸಲಿದ್ದು, ಜನಕಪುರದಲ್ಲಿ ರಾಮ-ಜಾನಕಿ ಮಂದಿರಲ್ಲಿ ಪೂಜೆ ಸಲ್ಲಿಸಲಿದ್ದಾರೆ.ಸೀತಾ ಸ್ವಯಂವರ ನಡೆದ ಸ್ಥಳವೆಂದು ಹೇಳಲಾಗುವ ರಂಗಭೂಮಿ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. (ಎಸ್.ಎಚ್)

Leave a Reply

comments

Related Articles

error: