ಮೈಸೂರು

ಸಂವಿಧಾನ ಉಳಿವಿಗಾಗಿ ಕರ್ನಾಟಕ : ಮೇ.8ರಂದು ಸಮಾರೋಪ

ಮೈಸೂರು,ಮೇ.5 : ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಮಾವೇಶ ಸಮಿತಿ ವತಿಯಿಂದ ಸಮಾವೇಶದ ಸಮಾರೋಪವನ್ನು ದೇವರಾಜ ಮೊಹಲ್ಲಾದ ಆಲಮ್ಮನವರ ಛತ್ರದಲ್ಲಿ ಮೇ.8ರಂದು ಹಮ್ಮಿಕೊಂಡಿದೆ ಎಂದು ಸಂಚಾಲಕ ಕೆ.ಆರ್.ಗೋಪಾಲಕೃಷ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನ ಉಳಿವಿಗಾಗಿ ರಾಜ್ಯದ 26 ಕಡೆ ನಡೆಸಿದ ಸಮಾವೇಶದ ಸಮಾರೋಪ ಸಮಾರಂಭವನ್ನು ನಗರದಲ್ಲಿ ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ  ಹಿರಿಯ ಸ್ವಾತಂತ್ರ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಎ.ಕೆ.ಸುಬ್ಬಯ್ಯ ಉದ್ಘಾಟಿಸುವರು. ಬಹುಬಾಷಾ ನಟ ಪ್ರಕಾಶ್ ರೈ. ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್,ನೂರ್ ಶ್ರೀಧರ್ ಸೇರಿದಂತೆ ದಲಿತ ಸಂಘಟನೆಗಳು, ರಾಜ್ಯ ರೈತ ಸಂಘ, ನೆಲೆ ಹಿನ್ನಲೆ ಹಾಗೂ ಇತರೆ ಸಂಘಟನೆಗಳು ಭಾಗಿಯಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ರಾಜಶೇಖರ ಕೋಟೆ, ಮಲ್ಲಳ್ಳಿ ನಾರಾಯಣ, ಜಿ.ಸಂತೋಷ್, ಅಸ್ಸಾದ್ದುಲ್ಲಾ, ಮಹೇಶ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: