
ಪ್ರಮುಖ ಸುದ್ದಿ
ಐಎನ್ ಸಿ ಇದ್ದ ಕಾಂಗ್ರೆಸ್ ಕರ್ನಾಟಕ ಚುನಾವಣೆಯ ನಂತರ ಪಿಪಿಪಿ ಆಗಲಿದೆ : ಪ್ರಧಾನಿ ಮೋದಿ ವ್ಯಂಗ್ಯ
ರಾಜ್ಯ(ಶಿವಮೊಗ್ಗಾ)ಮೇ.5:- ಕಾಂಗ್ರೆಸ್ ಮುಕ್ತ ಭಾರತದ ಕನಸನ್ನು ಹೊತ್ತರಿರುವ ಪ್ರಧಾನಿ ನರೇಂದ್ರ ನೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಐಎನ್ ಸಿ ಇದ್ದ ಕಾಂಗ್ರೆಸ್ ಕರ್ನಾಟಕ ವಿಧಾನ ಸಭಾ ಚುನಾವಣೆಯ ನಂತರ ಪುದುಚೇರಿ, ಪಂಜಾಬ್ ಮತ್ತು ಪರಿವಾರ ‘ಪಿಪಿಪಿ ‘ಕಾಂಗ್ರೆಸ್ ಆಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ಕರ್ನಾಟಕದ ಜನತೆ ಈ ಬಾರಿ ಕಾಂಗ್ರೆಸ್ ನ್ನು ಸೋಲಿಸಲಿದ್ದಾರೆ. ಈಗ ಕಾಂಗ್ರೆಸ್ ಪುದುಚೇರಿ, ಪಂಜಾಬ್ ಕರ್ನಾಟಕದಲ್ಲಿ ಅಧಿಕಾರದಲ್ಲಿದೆ. ಚುನಾವಣೆಯ ಬಳಿಕ ಪಿಪಿಪಿ ಆಗಲಿದೆ ಎಂದರು. ಕಾಂಗ್ರೆಸ್ ದೇಶದೆಲ್ಲೆಡೆ ಸೋಲನುಭವಿಸಿದರೂ ವಿಚಲಿತಗೊಂಡಿರಲಿಲ್ಲ. ಆದರೆ ಕರ್ನಾಟಕದಲ್ಲಿ ಸೋತರೆ ಅವರಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಇಲ್ಲಿಂದ ದೆಹಲಿಗೆ ಹೋಗುವ ಆದಾಯ ನಿಂತು ಹೋದರೆ ಕಾಂಗ್ರೆಸ್ ನಾಯಕರನ್ನು ಸಂತೃಪ್ತಗೊಳಿಸುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ ಎಂದರು. ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿಯಾದರೂ ಜೇಬು ತುಂಬಿಸಿಕೊಳ್ಳಬೇಕೆನ್ನುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು. (ಎಸ್.ಎಚ್)