ಮೈಸೂರು

ಅಸಮಾನತೆ ತೊಲಗಿಸಲು ಮಾತೃಭಾಷೆ ಹಾಗೂ ಏಕರೂಪ ಪ್ರಾಥಮಿಕ ಶಿಕ್ಷಣಕ್ಕೆ ಆಧ್ಯತೆ : ಸ್ವರಾಜ್ ಇಂಡಿಯಾದ ಪ್ರಣಾಳಿಕೆ

ಮೈಸೂರು, ಮೇ.5 : ಈ ಬಾರಿಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿಗಳ ಪರವಾಗಿನ ಚುನಾವಣಾ ಪ್ರಚಾರದ ಪ್ರಣಾಳಿಕೆಯನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರಂಗಸ್ವಾಮಿಶೆಟ್ಟಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿ ಪ್ರೊ. ಶಬ್ಬೀರ್ ಮುಸ್ತಫಾ ಮಾತನಾಡಿ, ಈ ಪ್ರಣಾಳಿಕೆ ಇತರೆ ಪಕ್ಷಗಳ ರೀತಿ ಆಶ್ವಾಸನೆಗಳಲ್ಲ. ಬದಲಾಗಿ, ದೇಶ ಎದುರಿಸುತ್ತಿರುವ ಸಮಸ್ಯೆಗಳ ವಿಶ್ಲೇಷಣೆ, ಅದಕ್ಕೆ ಸೂಚಿಸಿರುವ ಪರಿಹಾರವಾಗಿದೆ.

ಮಕ್ಕಳು ಶಾಲೆಯಲ್ಲಿ ಓದುವಾಗ ಶ್ರೀಮಂತರ ಮಕ್ಕಳ ವಿದ್ಯಾಭ್ಯಾಸ, ಬಡ ಮಕ್ಕಳ ವಿದ್ಯಾಭ್ಯಾಸ ಎಂಬ ತಾರತಮ್ಯಗಳಿದ್ದು, ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ತಮ್ಮ ಪಕ್ಷ ನರ್ಸರಿಯಿಂದ ನಾಲ್ಕನೇ ತರಗತಿವರೆಗೆ ಸೌಲಭ್ಯ, ಪಠ್ಯ ವಿಷಯಗಳಲ್ಲಿ ಏಕರೂಪತೆ ತರಲಿದೆ.

ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಿದೆ, ಕೃಷಿ, ಉದ್ಯೋಗ ಸೃಷ್ಟಿಗೂ ಗಮನ ನೀಡಲಿರುವ ಅಂಶ ಪ್ರಣಾಳಿಕೆ ಒಳಗೊಂಡಿದೆ ಎಂದು ವಿವರ ನೀಡಿದರು.

ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರೂ, ಅದಕ್ಕಿಂತಲೂ ಹೆಚ್ಚಿನ ಹಾನಿ ಅದರ ಕೋಮುವಾದ ಮಾಡಿದೆ. ಇಡೀ ದೇಶದ ಶೇ. 70 ರಷ್ಟು ಸಂಪತ್ತು ಕೇವಲ ಶೇ. 13 ರಷ್ಟು ಜನರ ಕೈಯ್ಯಲ್ಲಿದ್ದು, ಕಾಯಂ ಉದ್ಯೋಗವೇ ಎಲ್ಲೂ ಇಲ್ಲದಂತಾಗುತ್ತ ಕೇವಲ, ಅರೆ ಕಾಲಿಕ, ಗುತ್ತಿಗೆ ಉದ್ಯೋಗ ಪದ್ಧತಿಗೆ ಕೇಂದ್ರ ಸರ್ಕಾರ ಕಾರಣವಾಗಿದೆ ಎಂದು ದೂರಿದರು.

ಪಕ್ಷದ ಕೆ.ಆರ್. ಕ್ಷೇತ್ರದ ಅಭ್ಯರ್ಥಿ ಭಾನುಮೋಹನ್, ಚಂದ್ರಶೇಖರ ವರ್ಮಾ, ಇತರರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: