ಮೈಸೂರು

ಮಾಜಿ ಸಂಸದ ವಿಶ್ವನಾಥ್ ಪುತ್ರ ಪೂರ್ವಜ್ ಅವರ ಸರ ಕಸಿದು ಪರಾರಿಯಾಗಿದ್ದ ಇಬ್ಬರ ಬಂಧನ

ಮೈಸೂರು,ಮೇ.6:- ಮಾಜಿ ಸಂಸದ ವಿಶ್ವನಾಥ್ ಪುತ್ರ ಪೂರ್ವಜ್ ವಿಶ್ವನಾಥ್ ಅವರ ಬಳಿ ಸರಗಳ್ಳತನ ಮಾಡಿ ಪರಾರಿಯಾಗಿದ್ದ  ಇಬ್ಬರು ಆರೋಪಿಗಳನ್ನು  ನಗರದ ಸಿಸಿಬಿ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಬಂಧಿತರನ್ನು ಇಮ್ರಾನ್ ಖಾನ್( 25 ) ಪ್ರೀತಂ ( 24) ಎಂದು ಗುರುತಿಸಲಾಗಿದ್ದು,  ಬಂಧಿತರಿಂದ 140ಗ್ರಾಂ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ.   ಒಂದು ತಿಂಗಳ ಹಿಂದೆ ಪೂರ್ವಜ್  ಅವರ  ಸರಸ್ವತಿಪುರಂ ನಿವಾಸದ ಬಳಿ ಇಬ್ಬರು ಆರೋಪಿಗಳು ಸರ ಕಸಿದು ಪರಾರಿಯಾಗಿದ್ದರು.

ಬೈಕ್ ನಲ್ಲಿ ಬಂದಿದ್ದ ಇಬ್ಬರು ಆರೋಪಿಗಳು  ಸರ ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: