ಕರ್ನಾಟಕಪ್ರಮುಖ ಸುದ್ದಿ

ಎಸ್ಸೆಸೆಲ್ಸಿ ಫಲಿತಾಂಶ ಆನ್ಲೈನ್ ಮೂಲಕ ಪ್ರಕಟ: ನೋಡುವುದು ಹೇಗೆ?

ಬೆಂಗಳೂರು (ಮೇ 6): ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಇಂದು (ಮೇ 7) ಪ್ರಕಟವಾಗಿದೆ. ಮಧ್ಯಾಹ್ನ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಫಲಿತಾಂಶವನ್ನು ವೆಬ್ ಸೈಟ್’ಗಳಲ್ಲಿ ಪ್ರಕಟಿಸಿದೆ. ಬೆಳಿಗ್ಗೆ 11 ಗಂಟೆಯಿಂದಲೇ ವೆಬ್’ಸೈಟ್ ಗಳಲ್ಲಿ ಫಲಿತಾಂಶ ಲಭ್ಯವಿದೆ.

ನೋಡುವುದು ಹೇಗೆ?

ಫಲಿತಾಂಶ ನೋಡಲು ವೆಬ್ ತಾಣಗಳಾದ http://karresults.nic.in/ ಮತ್ತು http://kseeb.kar.nic.in/ ಗಳಿಗೆ ಭೇಟಿ ಕೊಟ್ಟು.  ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಲಿಂಕ್ ಕ್ಲಿಕ್ ಮಾಡಿ. ನಂತರ ನಿಮ್ಮ ರೋಲ್ ನಂಬರ್ ಹಾಗೂ ಇನ್ನಿತರ ಮಾಹಿತಿ ನಮೂದಿಸಿ submit ಬಟನ್ ಒತ್ತಿ.

ಹೀಗೆ ಮಾಡಿದ ನಂತರ ಕಂಪ್ಯೂಟರ್ ತೆರೆಯ ಮೇಲೆ ಫಲಿತಾಂಶ ತೆರೆದುಕೊಳ್ಳುತ್ತದೆ. ಫಲಿತಾಂಶದ ವಿವರಗಳನ್ನೊಳಗೊಂಡ ಮುದ್ರಿತ ಪ್ರತಿ ಬೇಕಿದ್ದರೆ ಪ್ರಿಂಟ್ ಔಟ್ ತೆಗೆದುಕೊಳ್ಳಲೂ ಅವಕಾಶವಿದೆ.

ಮಾರ್ಚ್ 23 ರಿಂದ ಏಪ್ರಿಲ್ 6ರವರೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಒಟ್ಟು 8,54, 424 ವಿದ್ಯಾರ್ಥಿಗಳು ಬರೆದಿದ್ದರು. ಏಪ್ರಿಲ್ 15 ರಿಂದ 25 ರವರೆಗೆ ಉತ್ತರ ಪತ್ರಿಕೆ ಮೌಲ್ಯಮಾಪನ ನಡೆದಿತ್ತು. ಇದೀಗ ಫಲಿತಾಂಶ ಪ್ರಕಟಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: