ಮೈಸೂರು

ಬಿಗ್ ಬಜಾರ್, ಎಫ್‍ಬಿಬಿ ಸ್ಟೋರ್‍ ಮೂಲಕ ಹಣ ತೆಗೆಯುವ ಅವಕಾಶ

ನೋಟು ನಿಷೇಧದಿಂದ ಸೃಷ್ಟಿಯಾಗಿರುವ ಸಮಸ್ಯೆಯನ್ನು ಗಮನಿಸಿದ ಬಿಗ್‍ ಬಜಾರ್ ನಾಗರಿಕರಿಗೆ ತಮ್ಮ ಎಲ್ಲ ಸ್ಟೋರ್‍ಗಳಿಂದ (ಎಫ್‍ಬಿಬಿ ಸ್ಟೋರ್‍ ಕೂಡ ಸೇರಿ) ಡೆಬಿಟ್ ಕಾರ್ಡ್ ಉಪಯೋಗಿಸಿ ತಮ್ಮ ಬ್ಯಾಂಕ್ ಖಾತೆಯಿಂದ 2 ಸಾವಿರ ರೂ.ವರೆಗೆ ಹಣವನ್ನು ತೆಗೆಯಬಹುದು ಎಂದು ತಿಳಿಸಿದೆ. ಈ ಸೌಲಭ್ಯವು ದೇಶದ 215ಕ್ಕಿಂತಲೂ ಹೆಚ್ಚಿನ ಪಟ್ಟಣ ಮತ್ತು ಊರುಗಳಲ್ಲಿರುವ 258 ಬಿಗ್ ಬಜಾರ್ ಮತ್ತು ಎಫ್‍ಬಿಬಿ ಸ್ಟೋರ್‍ಗಳಲ್ಲಿ ಲಭ್ಯವಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ನಗದು ಹಣದಿಂದ ಪಿಒಎಸ್ ಯಂತ್ರದ ಮೂಲಕ ಈ ಸೌಲಭ್ಯವನ್ನು ಒದಗಿಸಿ ಬಿಗ್‍ ಬಜಾರ್‍ಗೆ ಸಹಾಯ ಮಾಡಿದೆ.

ನೋಟು ಅಮಾನ್ಯಗೊಂಡಿದ್ದರಿಂದ ಜನಸಾಮಾನ್ಯರು ಪಡುತ್ತಿರುವ ತೊಂದರೆ ಮತ್ತು ಕೇಂದ್ರ ಸರಕಾರದ ಈ ಆರ್ಥಿಕ ನೀತಿಗೆ ಬೆಂಬಲ ನೀಡಲು ನಾವು ಶ್ರಮಿಸುತ್ತಿದ್ದೇವೆ. ಬ್ಯಾಂಕ್‍ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯುವ ಬದಲು ನಮ್ಮ ಸ್ಟೋರ್‍ಗಳಲ್ಲಿ ಬಗದು ಹಣ ತೆಗೆಯಬಹುದು ಎಂದು ಫ್ಯೂಚರ್ ರಿಟೇಲ್ ಲಿಮಿಟೆಡ್‍ನ ಅಧ್ಯಕ್ಷರಾದ ಕಿಶೋರ ಬಿಯಾಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಟೋರ್‍ಗಳಲ್ಲಿ ವಿಶೇಷ ಕೌಂಟರ್‍ಗಳನ್ನು ತೆರೆಯಲಾಗಿದ್ದು, ಡೆಬಿಟ್ ಕಾರ್ಡ್ ಬಳಸಿ 2 ಸಾವಿರದವರೆಗೆ ನಗದು ಹಣ ಪಡೆಯಬಹುದಾಗಿದೆ.

Leave a Reply

comments

Related Articles

error: