ಮೈಸೂರು

ಆದಿ ಚುಂಚನಗಿರಿ ಮೈಸೂರು ಶಾಖಾ ಮಠಕ್ಕೆ ಕಾಂಗ್ರೆಸ್ ಅಭ್ಯರ್ಥಿ ಡಾ. ಯತೀಂದ್ರ ಭೇಟಿ

ಮೈಸೂರು,ಮೇ.7:- ಆದಿ ಚುಂಚನಗಿರಿ ಮೈಸೂರು ಶಾಖಾ ಮಠಕ್ಕೆ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಯತೀಂದ್ರ ಭೇಟಿ ನೀಡಿದರು.

ಇಂದು ಬೋಗಾದಿಯಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ ಅವರು ಸೋಮನಾಥಸ್ವಾಮಿಗಳ ಆಶೀರ್ವಾದ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ವರುಣಾ ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತ. ಪ್ರಚಾರಕ್ಕೆ ಹೋದಾಗ ರಾಕೇಶ್ ನೆನಪಾಗುತ್ತಾನೆ. ಜನ ನನ್ನನ್ನು ರಾಕೇಶ್ ಅಂತಲೇ ಗುರ್ತಿಸುತ್ತಿದ್ದಾರೆ. ನಾವು ರಾಕೇಶ್ ನನ್ನು ಮರೆತರೂ ಜನ ಮರೆತಿಲ್ಲ. ವರುಣಾದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಅದನ್ನು ನಿವಾರಿಸಬೇಕಿದೆ. ವರುಣಾ ಕ್ಷೇತ್ರದ ಜನರನ್ನು ಸಂಪೂರ್ಣ ಸಾಕ್ಷರರನ್ನಾಗಿ ಮಾಡಬೇಕಿದೆ ಎಂದು ಹೇಳಿದರು.

ಯತೀಂದ್ರ ಅವರ ಜೊತೆ ಚಾಮರಾಜ ಕ್ಷೇತ್ರದ ಶಾಸಕ ವಾಸು ಕೂಡ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: