
ಮನರಂಜನೆ
ಯುವರಾಜ್ ಸಿಂಗ್ ಕೈ ಹಿಡಿದ ಗುರುಬಸಂತ್ ಕೌರ್!
ಟೀಂ ಇಂಡಿಯಾದ ಆಲ್ ರೌಂಡರ್ ಕ್ರಿಕೆಟಿಗ ಯುವರಾಜ್ ಸಿಂಗ್ ನಟಿ ಹಾಗೂ ರೂಪದರ್ಶಿ ಗುರ್ ಬಸಂತ್ ಕೌರ್ ಅವರನ್ನು ಇತ್ತೀಚೆಗೆ ವರಿಸಿದ್ದಾರೆ.
ಇದೇನಿದು ಗಾಸಿಪ್…! ಅಂತೀರಾ? ಕಳೆದ ನ.30ರಂದು ಬ್ರಿಟನ್ ರೂಪದರ್ಶಿ ಹೇಜೆಲ್ ಕೀಚ್ರವನ್ನು ಸಿಖ್ ಸಂಪ್ರದಾಯದಂತೆ ಮದುವೆಯಾದರಲ್ಲ ಮತ್ತೇನು ಹೊಸ ಗಾಸಿಪ್ ಎನ್ನುವಿರಾ? ಮದುವೆ ನಿಶ್ಚಯವಾದ ನಂತರ ಗಂಡನ ಮನೆಯವರ ಅಭಿಲಾಶೆಯಂತೆ ಅವರವರ ಧರ್ಮದ ರೀತಿ-ನೀತಿಗೆ ಅನುಸಾರವಾಗಿ ಹೆಸರು ಮಾರ್ಪಡಿಸಿಕೊಳ್ಳುವುದು ಭಾರತದಲ್ಲಿ ಸಂಪ್ರದಾಯ. ಇದಕ್ಕೆ ವಿದೇಶಿ ಚೆಲುವೆ ಯುವಿಯ ಹೃದಯರಾಣಿ ಹೇಜಲ್ ಕೂಡ ಹೊರತಾಗಿಲ್ಲ.
34 ವರ್ಷದ ಯುವರಾಜ್ ಮತ್ತು ಬ್ರಿಟನ್ ಮೂಲದ 29 ವರ್ಷದ ಹೇಜೆಲ್, ಕಳೆದ 3 ವರ್ಷಗಳಿಂದ ಪರಿಚಿತರಾಗಿ ಕೈ-ಕೈ ಹಿಡಿದು ಓಡಾಡಿ ಕೊನೆಗೆ ಮದುವೆಯೆಂಬ ಬಂಧನದಲ್ಲಿ ಒಂದಾಗಿದ್ದಾರೆ.
ಮದುವೆಯಾದ ನಂತರ ಹೇಜಲ್ ತನ್ನ ಹೆಸರನ್ನು ಪತಿಯ ಧರ್ಮದನುಸಾರ ಗುರುಬಸಂತ್ ಕೌರ್ ಆಗಿ ಮರುನಾಮಕರಣ ಮಾಡಿಕೊಂಡಿದ್ದಾರೆ. ಯುವಿ ನಂಬುವ ಹಾಗೂ ಗೌರವಿಸುವ ಬಾಬಾ ರಾಮ್ಸಿಂಗ್ ಸಲಹೆಯಂತೆ ಹೆಸರನ್ನು ಬದಲಾಯಿಸಿಲಾಗಿದೆ. ಹೇಜಲ್ ತಂದೆ ಕ್ರೈಸ್ತರಾಗಿದ್ದು ಕ್ರಿಶ್ಚಿಯನ್ ಧರ್ಮದ ರೀತಿ-ನೀತಿಗೆ ಅನುಸಾರವಾಗಿಯೂ ಈ ಜೋಡಿ ಗೋವಾದಲ್ಲಿ ರಿಂಗ್ ಬದಲಿಸಿಕೊಂಡಿದೆ. ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಆತನ ಗೆಳತಿ ಬಾಲಿವುಡ್ನ ಖ್ಯಾತ ನಟಿ ಅನುಷ್ಕಾ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಕ್ರಿಕೆಟಿಗರು, ಗಣ್ಯರು ಸಹ ವಿವಾಹಕ್ಕೆ ಸಾಕ್ಷಿಯಾದರು.
ನೂತನ ದಂಪತಿಗಳು ಮಧುಚಂದ್ರಕ್ಕೆಂದು ಹವಾಯಿ, ಬೋರಾ ಬೋರಾ ಅಥವಾ ಮಾಲ್ಡೀವ್ಸ್ಗೆ ತೆರಳುತ್ತಾರಂತೆ.
ಯುವಿ ಈ ಮೊದಲು ನಟಿ ಪ್ರೀತಿ ಜಿಂಟಾ ಒಡೆತನದ ಒಡೆತನದ ಐಪಿಎಲ್ ಕ್ರಿಕೆಟ್ ತಂಡ ಕಿಂಗ್ಸ್ ಇಲವೆಂಬ್ ಪಂಜಾಬ್ ಗೆ ನಾಯಕರಾಗಿ ಎರಡು ಆವೃತ್ತಿಯಲ್ಲಿ ಮುನ್ನಡೆಸಿದ್ದರು. ನಂತರ ಯುವಿ ದೇಹದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಇಂಥ ಕಠಿಣ ಪರಿಸ್ಥಿತಿಯಲ್ಲಿ ಧೃತಿಗೆಡದೆ ಯುವಿ ರೋಗದಿಂದ ಗುಣಮುಖರಾಗಿದ್ದರು.