ಕರ್ನಾಟಕಪ್ರಮುಖ ಸುದ್ದಿಮೈಸೂರು

ಶಾಸಕ ಜಿ.ಟಿ.ಡಿ.ಕೃಪಾಪೋಷಿತರಿಂದ ಚಾಮುಂಡೇಶ್ವರಿಯಲ್ಲಿ ಭಯದ ವಾತಾವರಣ : ಮಂಜುಳಾ ಮಾನಸ ಆರೋಪ

ಚುನಾವಣಾ ಆಯೋಗಕ್ಕೆ ದೂರು

ಮೈಸೂರು,ಮೇ.7 : ಶಾಸಕ ಜಿ.ಟಿ.ದೇವೇಗೌಡ. ಕೃಪಾಪೋಷಿತರು ಪುಂಡಪೋಕರಿಯರ ಮೂಲಕ ಚಾಮುಂಡೇಶ್ವರಿ ಕ್ಷೇತ್ರದ ಮತದಾರರನ್ನು ಎದುರಿಸುತ್ತಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಿರಂತರ ಹಲ್ಲೆ ನಡೆಸಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು  ಕಾಂಗ್ರೆಸ್ ವಕ್ತಾರೆ ಮಂಜುಳ ಮಾನಸ ನೇರವಾಗಿ ಆರೋಪಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿ, ಈಚೆಗೆ ಸಿಎಂ ಸಿದ್ದರಾಮಯ್ಯನವರ ಪರ ಚುನಾವಣಾ ಪ್ರಚಾರಕ್ಕೆಂದು ಆಗಮಿಸಿದ್ದ ಚಿತ್ರನಟ ದರ್ಶನ್ ಅವರನ್ನು ತಡೆಯಲು ಗುಂಡಾಗಳನ್ನು ಬಳಸಿದ್ದು, ಪಕ್ಷದ ಪರ ಪ್ರಚಾರ ನಡೆಸದಂತೆ ತಾಕೀತು ಮಾಡಿದ್ದಾರೆ. ಅಲ್ಲದೇ ನಾಗನಹಳ್ಳಿ, ಗೋಪಾಲಪುರ ಹಾಗೂ ಇನ್ನಿತರ ಗ್ರಾಮಗಳಲ್ಲಿ ರೋಡ್ ಶೋ ನಡೆಸುವಾಗ ನಡೆದಿರುವ ಘಟನೆಯಲ್ಲಿ ಮಾಜಿ ಗ್ರಾ.ಪಂ.ಸದಸ್ಯ ಜಯದೇವ್ ತೀವ್ರವಾಗಿ ಗಾಯಗೊಂಡಿದ್ದಾರೆ ಇವರೊಂದಿಗೆ ವಿದ್ಯಾಶಂಕರ್, ಲೋಹಿತ್, ಅರ್ಜುನ್ ಅವರುಗಳು  ಹಲ್ಲೆಗೊಳಗಾಗಿದ್ದು ಈಗ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಾಂತಿಯುತ ಕ್ಷೇತ್ರದಲ್ಲಿ ಇಂದು ಭಯದ ವಾತಾವರಣವಿದ್ದು, ಮತದಾರರು ಸ್ವ ಇಚ್ಛೆಯಂತೆ ಮತದಾನ ಮಾಡದಂತಹ ಸ್ಥಿತಿ ತಲೆ ದೂರಿದ್ದು,. ಸೋಲಿನ ಭೀತಿಯಲ್ಲಿ ಜಿ.ಟಿ.ದೇವೇಗೌಡ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು..

ಮೈಸೂರು ಕಾಂಗ್ರೆಸ್ ಗ್ರಾಮಾಂತರ ಮಹಿಳಾ ಪ್ರಧಾನ ಕಾರ್ಯದರ್ಶಿ ಪಾರ್ವತಿ ಹಾಗೂ ಗ್ರಾ.ಪಂ.ಅಧ್ಯಕ್ಷೆ ಚೈತ್ರ ಘಟನೆ ಬಗ್ಗೆ ಮಾತನಾಡಿ, ಬೀದಿ ದೀಪಗಳನ್ನು ಆರಿಸಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ, ಮಹಿಳೆಯರ ಮೇಲೆಯೂ ದೌರ್ಜನ್ಯವೆಸಗಲಾಗಿದೆ. ಇದುವರೆಗೂ ತಪ್ಪಿತಸ್ಥರನ್ನು ಬಂಧಿಸದೆ ಪೊಲೀಸರು ಪಕ್ಷಪಾತ ನಡೆಸಿದ್ದು ದೂರನ್ನು ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ನಾಗನಹಳ್ಳಿ ಗ್ರಾಮದ ನಾನಾ ಮಹೇಶ್ ಮಾತನಾಡಿ, ಸಿದ್ದರಾಮಯ್ಯನವರು ಬಿಡುಗಡೆ ಮಾಡಿದ ಹಣದಿಂದಲೇ ಗ್ರಾಮ ಅಭಿವೃದ್ಧಿ ಆಗಿದ್ದು, ಒಂದು ವೇಳೆ ತಮ್ಮಿಂದ ಅಭಿವೃದ್ಧಿ ಆಗಿದೆ ಎಂದು ಹೇಳುವುದಿದ್ದರೆ ಶಾಸಕ ಜಿ.ಟಿ. ದೇವೇಗೌಡ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿ, ಜೊತೆಗೆ, ಸಿದ್ದರಾಮಯ್ಯನವರಿಂದಲೇ ಬೆಳೆದ ಜಿ.ಟಿ.ಡಿ. ಈಗ ಸಿದ್ದರಾಮಯ್ಯ ವಿರುದ್ಧ ವಿಷದ ಬೀಜ ಬಿತ್ತುತ್ತಿದ್ದು, ತಮ್ಮ ಭಾಗದ ಜನರಿಗೆ ಇದರ ಅರಿವಿದೆ ಎಂದು ತಿಳಿಸಿದರು.

ತಪ್ಪಿತಸ್ಥರ ವಿರುದ್ಧ ದೂರು :

ಘಟನೆಗೆ ಕಾರಣೀಕರ್ತನಾದ ಗ್ರಾ.ಪಂ. ಸದಸ್ಯ ಭಾಸ್ಕರ್ ಹಾಗೂ ಇತರರ ಮೇಲೆ ಚುನಾವಣಾ ಆಯೋಗಕ್ಕೆ, ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕ್ರಮ ಕೈಗೊಳ್ಳಲು ಪೊಲೀಸ್ ಕಮಿಷನರ್ ಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಪ್ರತ್ಯಕ್ಷ ದರ್ಶಿಗಳಾದ ರೇಣುಕಾ ಉಮಾಶಂಕರ್, ಪ್ರೀತಿ, ಭಾನುಪ್ರಿಯಾ ಮೊದಲಾದವರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: