
ಮೈಸೂರು
ಎಸ್ ಜೆ ಸಿಇ :ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
ಅಮೇರಿಕಾದ ಬಹು ವಿಭಾಗಗಳ ವೈಜ್ಞಾನಿಕ ಸಂಸ್ಥೆಯಾದ ದಿ ಅಮೇರಿಕನ್ ಮೆಡಿಕಲ್ ಇನ್ಫಾರ್ ಮ್ಯಾಟಿಕ್ಸ್ ಅಸೋಸಿಯೇಷನ್ ಸರ್ಜಿಕಲ್ ಸೈಟ್ ಇನ್ ಫೆಕ್ಷನ್ ಕುರಿತ ಸೋಂಕುಗಳನ್ನು ಕಂಡು ಹಿಡಿಯಲು ತಿಳಿಸಿದ್ದು, ವಿಶ್ವದೆಲ್ಲೆಡೆಯಿಂದ 51 ಸಂಶೋಧನಾ ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಮೈಸೂರಿನ ಎಸ್ ಜೆಸಿಇ ತಂಡ ಪ್ರಥಮ ಬಹುಮಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
ಸೋಂಕಿನ ಕುರಿತಂತೆ 7725ರೋಗಿಗಳ ಪೈಕಿ 4.5ಮಿಲಿಯನ್ ರಕ್ತಕಣಗಳ ಬಗೆಗಿನ ಮಾಹಿತಿಯನ್ನು ನೀಡಲಾಗಿತ್ತು.ಇದರ ಶೇ.80ರ ಮಾಹಿತಿಯನ್ನು ಸ್ಪರ್ಧಿಗಳಿಗೆ ನೀಡಲಾಗಿ, ಉಳಿದ ಮಾಹಿತಿಯನ್ನು ಮೌಲ್ಯಮಾಪನ ಪ್ರಕ್ರಿಯೆಗೆ ಬಳಸಲಾಗಿತ್ತು. ಸ್ಪರ್ಧೆಯಲ್ಲಿ 13ತಂಡಗಳು ಮಾತ್ರ ತಮ್ಮ ಮಾದರಿಗಳನ್ನು ಸಲ್ಲಿಸುವಲ್ಲಿ ಯಶಸ್ವಿಯಾಗಿವೆ. ನವೆಂಬರ್ ನಲ್ಲಿ ಚಿಕಾಗೋದಲ್ಲಿ ನಡೆದ ಎಎಂಐಎ 2016 ರ ವಿಚಾರಸಂಕಿರಣದಲ್ಲಿ ಅಂತಿಮ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಮೈಸೂರಿನ ಎಸ್ ಜೆಸಿಇ ತಂಡ ಹಾಗೂ ಯೂನಿವರ್ಸಿಟಿ ಆಫ್ ಕ್ಯಾಲಿಪೋರ್ನಿಯಾದ ಡಾ.ಆರ್.ವಿ.ಪ್ರಭುಶಂಕರ್ ರಚಿಸಿದ್ದ ಮಾದರಿಗೆ ಪ್ರಥಮ ಬಹುಮಾನ ದೊರಕಿದೆ.