ಪ್ರಮುಖ ಸುದ್ದಿಮೈಸೂರು

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಎ.ರಾಮದಾಸ್, ಪ್ರೇಮಕುಮಾರಿಯೊಂದಿಗೆ 5ಕೋಟಿ ರಹಸ್ಯ ಡೀಲ್? : ವಿಡಿಯೋ ವರದಿ

ಮೈಸೂರು (ಮೇ 7): ಇದೇ ತಿಂಗಳ 12ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣೆಗೂ ಮುನ್ನವೇ ಮೈಸೂರು ಕೆ.ಆರ್.ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುರಿತಂತೆ ಬಾಂಬ್ ಸಿಡಿದಿದೆ. ಸ್ಥಳೀಯ ಮಾಧ್ಯಮವೊಂದು ನಡೆಸಿದ ಸ್ಟಿಂಗ್ ಆಪರೇಷನ್ ಕುರಿತ ವಿಡಿಯೋ ‘ಸಿಟಿಟುಡೆ’ಗೆ ಲಭ್ಯವಾಗಿದ್ದು, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮದಾಸ್ ಮಾಜಿ ಪ್ರೇಯಸಿ ಪ್ರೇಮಕುಮಾರಿ ಹಿಡನ್ ಕ್ಯಾಮರಾ ಮುಂದೆ ಎಲ್ಲ ರಹಸ್ಯಗಳನ್ನು ಎಳೆಎಳೆಯಾಗಿ ತೆರೆದಿರಿಸಿದ್ದಾರೆ. ಈ ‘ವಿಡಿಯೋ’ ಬಿಜೆಪಿಯ ಮತ್ತು ಮಾಧ್ಯಮದ ಹೊಲಸು ಮನಸ್ಸನ್ನು ತೆರೆದಿರಿಸಿದೆ.

ಸ್ಥಳೀಯ ಮಾಧ್ಯಮ ನಡೆಸಿದ ಸ್ಟಿಂಗ್ ಆಪರೇಷನ್’ನಲ್ಲಿ ನಾಮಪತ್ರ ಸಲ್ಲಿಸುವ ಹಲವು ದಿನಗಳ ಹಿಂದಿನ ರಹಸ್ಯವನ್ನು ತೆರೆದಿರಿಸಿದ್ದಾರೆ. ಮಾಧ್ಯಮದಲ್ಲಿ ಸೆರೆ ಹಿಡಿಯಲಾದ ವಿಡಿಯೋ ಸ್ಥಳೀಯ ಮಾಧ್ಯಮದ ಪತ್ರಕರ್ತ ಮತ್ತು ರಾಜಕೀಯ ಪಕ್ಷಗಳ ಕೊಳಕು ಮನಸ್ಥಿತಿಯನ್ನು ವಿವರಿಸುತ್ತವೆ. ವಿಧಾನಸಭಾ ಚುನಾವಣೆಗೂ ಮುನ್ನವೇ ಬಿಜೆಪಿ ನಾಯಕ ರಾಮದಾಸ್’ಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ಚರ್ಚಿಸಲು ಪ್ರೇಮಕುಮಾರಿಯನ್ನು ಮಾಧ್ಯಮ ತನ್ನ ಕಚೇರಿಗೆ ಕರೆದಿದ್ದು, ಹಲವು ಮುಖ್ಯ ವಿಷಯಗಳ ಕುರಿತು ಚರ್ಚಿಸಿದ್ದು, ವಿಡಿಯೋದಲ್ಲಿ ಸೋರಿಕೆಯಾಗಿದೆ.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮಾಜಿ ಸಚಿವ ಎಸ್.ಎ.ರಾಮದಾಸ್ ವಿರುದ್ಧ ತಾನೂ ಚುನಾವಣೆಗೆ ನಿಲ್ಲತ್ತೇನೆ ಎಂದಿದ್ದ, ಒಂದು ದಿನ ಆರ್ ಎಸ್ ಎಸ್ ಕಚೇರಿಗೂ ತೆರಳಿ ರಾಷ್ಟ್ರೀಯ ಸ್ವಯಂ ಸೇವಕರನ್ನೇ ಬೆಚ್ಚಿ ಬೀಳಿಸಿದ್ದ, ನಾನು ನಿಮ್ಮ ಸಹೋದರಿ ರಾಮದಾಸ್’ಗೆ ಟಿಕೇಟ್ ಸಿಗದಂತೆ ಮಾಡಿ. ಅವರು ಚುನಾವಣೆಗೆ ನಿಲ್ಲುವುದು ಬೇಡ. ನನ್ನನ್ನೇ ಬೆಂಬಲಿಸಿ ಎಂದು ವಿನಂತಿಸಿಕೊಂಡಿದ್ದ ಪ್ರೇಮಕುಮಾರಿ ತನಗರಿವಿಲ್ಲದೇ ಇಟ್ಟ ಹಿಡನ್ ಕ್ಯಾಮರಾ ಮುಂದೆ ತನ್ನ ಮತ್ತು ರಾಮದಾಸ್ ನಡುವಿನ ಸಂಬಂಧವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಮೂವತ್ತು ವರ್ಷ ರಾಜಕೀಯ ಮಾಡಿದ ರಾಮ ಏನ್ ಕಲ್ತಿದ್ದಾರೆ ಎಂದು ಕೇಳುತ್ತಾರೆ ಪ್ರೇಮಾ..? ನನ್ನ ಗಂಡ ನನ್ನ ಗಂಡ ಎಂದೇ ಹೇಳಿಕೊಳ್ಳುವ ಈಕೆಗೆ ಆತ ಪತ್ನಿಯ ಸ್ಥಾನವನ್ನು ನೀಡಬೇಕಂತೆ. ಮತ್ತೇನನ್ನೂ ಅವನಿಂದ ಕೇಳಲ್ಲ. ಆತ ಒಟ್ಟು 64 ಲಕ್ಷ ರೂ. ಕೊಟ್ಟಿದ್ದ. ಅದರಲ್ಲಿ ಒಂದು ಪೈಸೆಯನ್ನೂ ಮುಟ್ಟಿಲ್ಲ. ಕೇಳಿದರೆ ಬಿಸಾಡುತ್ತೇನೆ. ತೇಜೋವಧೆ ಮಾಡುವುದರಿಂದ ಏನೂ ಪ್ರಯೋಜನ ಇಲ್ಲ. ನಾನವರ ವೈಫ್ ಆಗ್ಬೇಕು. ಇಲ್ಲದಿದ್ದರೆ ಇದೇ ವಿಷಯವನ್ನು ವಿರೋಧಪಕ್ಷದವರು ಬಳಸಿಕೊಳ್ಳುತ್ತಾರೆ. ಒಂದೇ ಕಲ್ಲಲ್ಲಿ ಮೂರು ಹಕ್ಕಿಗಳು ಉರುಳುತ್ತವೆ ಎನ್ನುವ ಪ್ರೇಮಾ ಯಾವ ಮೂರು ಹಕ್ಕಿಗಳಿಗೆ ಕಲ್ಲು ಹೊಡೆಯಲು ಸಿದ್ಧರಾಗಿದ್ದಾರೆ?

ತಿದ್ದುಕೊಳ್ಳಲು ಸಾಕಷ್ಟು ಸಮಯಾವಕಾಶ ಕೊಟ್ಟೆ ಅವರನ್ನು ದೇವರಿಗಿಂತಲೂ ಮೇಲ್ಪಂಕ್ತಿಯಲ್ಲಿಟ್ಟೆ. ನಮ್ಮ ನಡುವೆ ಅವರ ಸಹೋದರ ಶ್ರೀಕಾಂತ್ ಬಂದರು. ಯಡಿಯೂರಪ್ಪನ ಕಡೆಯವರೊಬ್ಬರು ನಮ್ಮ ಪ್ರಕರಣಕ್ಕೆ ವಕೀಲರನ್ನು ನೇಮಿಸಿದ್ದಾರೆ. ನಾನು ಅಫಿಡವಿಟ್’ನಲ್ಲೂ ಪ್ರೇಮಾ ರಾಮದಾಸ್ ಅಂತಲೇ ಎರಡು ಮೂರು ಕಡೆ ಸಹಿ ಹಾಕಿದ್ದೇನೆ. ದುಡ್ಡಿದೆ ಅಂತ ನ್ಯಾಯ ಕೊಂಡುಕೊಳ್ಳಲು ಸಾಧ್ಯವಿಲ್ಲ. ಈಗ ಮತ್ತೆ ರೀ ಓಪನ್ ಆಗಿದೆ. ರಾಜೀವ್ ಅವರು ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಶೋಭಾ ಕರಂದ್ಲಾಜೆ, ಈಶ್ವರಪ್ಪ ಅವರನ್ನು ಕೂಡ ಭೇಟಿ ಮಾಡಿಸಿದ್ದರು. ರಾಮದಾಸ್ ವೀಕ್’ನೆಸ್ ನನ್ನ ಬಳಿ ಇದೆ ಎನ್ನುತ್ತಾರೆ ಪ್ರೇಮಾ. ಎಲ್ಲಾ ಪಕ್ಷದವರೂ ತನಗೆ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದರು. ಎಂಎಲ್‍ಎ ಆಫರ್ ನೀಡಿದ್ದರು. ಆದರೆ ನಾನು ಹೋಗಿಲ್ಲ.

ಚುನಾವಣಾ ಕಣದಿಂದ ಪ್ರೇಮಾ ಹಿಂದೆ ಸರಿದಿದ್ದು ಯಾಕೆ..? ರಾಮದಾಸ್ ಕಡೆಯಿಂದ ನಡೀತಾ ಡೀಲ್..?

ನನಗೆ ಪವರ್ ಇದೆ ಅಂದರೆ ರಾಜಕೀಯಕ್ಕೆ ಬರಲು ಸಾಧ್ಯವಿಲ್ಲ. ಬುದ್ಧಿವಂತಿಕೆ ಇರಬೇಕು. 5 ಕೋಟಿ ಕೊಟ್ಟ ತಕ್ಷಣನೇ ಏನೂ ನಡೆಯಲ್ಲ. ನಾನು ಹಿಂದೆಸರಿಯಲ್ಲ. ಕುಳಿತು ಮಾತನಾಡಬೇಕು. ಈ ಮನುಷ್ಯ 30 ವರ್ಷ ರಾಜಕೀಯ ಮಾಡಿದ್ದಾನೆ. ಆದರೆ ಏನು ಕಲಿತ. ಒಂದು ಮಹಿಳೆಯನ್ನು ನಿಯಂತ್ರಿಸಲಾಗದ ಈತ ರಾಜ್ಯವನ್ನು ಹೇಗೆ ಆಳಲು ಸಾಧ್ಯ..?

ಯಾರಾದರೂ ಏನಾದರೂ ಹೇಳಿದ ತಕ್ಷಣ ಖಂಡಿತ ಓಕೆ ಅನ್ನಲ್ಲ. ಹತ್ತು ವರ್ಷದ ಹಿಂದೆ ರಾಮದಾಸ್’ನನ್ನು ಮುಗ್ಧತೆಯಿಂದ ನಂಬಿದ್ದಕ್ಕೆ ಶಿಕ್ಷೆ ಅನುಭವಿಸುತ್ತಿದ್ದೇನೆ. ನನಗೂ ಭವಿಷ್ಯವಿದೆ. ನನಗೆ ಪಬ್ಲಿಸಿಟಿ ಮಾಡುವ ಅವಶ್ಯಕತೆಯಿಲ್ಲ. ಇದು ಬೇರೆ ರಾಜಕೀಯ. ಹೊಸ ಅಲೆ ಎಂದಿದ್ದಾರೆ. ಅವರಿಂದ ನನಗೆ ಅನ್ಯಾಯವಾಗಿದೆ. ಅವರು ನನ್ನನ್ನು ಪತ್ನಿ ಎಂದು ಸ್ವೀಕರಿಸಬೇಕು ಎಂಬುದನ್ನು ಮಾಧ್ಯಮದ ಮುಂದಿರಿಸಿದ್ದಾರೆ.

ಅವರು ನನ್ನನ್ನು ರಹಸ್ಯವಾಗಿ ವಿವಾಹವಾಗಿದ್ದಾರೆ. ಎಲ್ಲಾ ಪಕ್ಷದವರೂ ತನಗೆ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದರು. ಎಂಎಲ್‍ಎ ಆಫರ್ ನೀಡಿದ್ದರು. ಆದರೆ ನಾನು ಹೋಗಿಲ್ಲ. ಇಷ್ಟೆಲ್ಲಾ ಆದರೂ ರಾಮದಾಸ್’ಗೆ ಬುದ್ಧಿ ಬಂದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೂ ಇವರಿಗೆ ಸ್ಥಾನ ಸಿಗಲ್ಲ. ರಾಮದಾಸ್ ಬಂದು ಮಾತನಾಡಲಿ. ಬೇರೆ ಯಾರ ಜೊತೆನೂ ನಾನು ಮಾತನಾಡಲ್ಲ. ಕಾಂಪ್ರಮೈಸ್ ಆಗುವುದಿದ್ದರೆ ಒಂದು ಮುಕ್ಕಾಲು ಕೋಟಿ ಕೊಡುತ್ತೇನೆ ಎಂದಿದ್ದ. ಹಣ ತಗೋಳೊದಿದ್ದರೆ ನಾನು ಆಗ್ಲೇ ಕಾಂಪ್ರಮೈಸ್ ಆಗ್ತಿದ್ದೆ.

ರಾಜರಾಜೇಶ್ವರಿ ನಗರದಲ್ಲಿ 50 ಲಕ್ಷ ಕ್ಕೆ ಒಂದು ಸೈಟ್, 20 ಲಕ್ಷ ರೂ.ಗಳ ಕಾರು, ಮನೆ ಕಟ್ಟಲು 50 ಲಕ್ಷ ರೂ, 20 ಲಕ್ಷ ರೂ.ಗಳ ಪೀಠೋಪಕರಣ, 20 ಲಕ್ಷ ರೂ.ಗಳನ್ನು ಮಕ್ಕಳ ಹೆಸರಲ್ಲಿ ಇಡಲು ಹೇಳ್ತಿದ್ದ. ಈಗ ತನಗೂ ಅವರಿಗೂ ಸಂಬಂಧವಿಲ್ಲ ಎನ್ನುತ್ತಿದ್ದಾನೆ.

ಮನೆ ಕಟ್ಟುವುದಕ್ಕೋಸ್ಕರ ತನ್ನ ತಮ್ಮನನ್ನು ಬೆಂಗಳೂರಿನಿಂದ ಕೆಲಸ ಬಿಡಿಸಿ ಕರೆಸಿದರು. ಮೂರು ತಿಂಗಳು ನಾಯಿ ತರ ನಮ್ಮನ್ನು ಅಲೆಸಿದರು, ನಾವೇನು ಭಿಕ್ಷುಕರಾ? ಆ ಟೈಮ್’ನಲ್ಲಿ ದೂರು ಕೊಡಬೇಕಾಗಿತ್ತು ಎಂದ ಮಾಧ್ಯಮದ ಪ್ರಶ್ನೆಗೆ, ಪವರ್’ನಲ್ಲಿದ್ದು ದೂರು ಕೊಟ್ಟಾಗ ಪವರ್  ಕಳ್ಕೋಬೇಕಾಗತ್ತೆ ಎಂದು ನಾನೇ ದೂರು ನೀಡಲು ಸ್ವಲ್ಪ ಲೇಟ್ ಮಾಡಿದ್ದೆ. ಜಯಲಕ್ಷ್ಮಿ(ಜಯಕ್ಕ) ಮಾಡಿದ ಹಾಗೇ ನಾನು ಕೂಡ ಮಾಡಬಹುದಿತ್ತಲ್ವ?

ರಾಮದಾಸ್ ಯಾವ ಪಕ್ಷದಿಂದ ನಿಂತುಕೊಂಡರೂ ಸಫರ್ ಮಾಡಬೇಕು. ರಾಜಕೀಯದಲ್ಲಿರುವವರು ಯಾರೂ ಪರ್ಫೆಕ್ಟ್ ಇಲ್ಲ. ಎಲ್ಲರಿಗೂ ಐದತ್ತು ಇದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಇತ್ತ ಮಾಧ್ಯಮದವರು ಪ್ರೇಮಕುಮಾರಿ ಜೊತೆ ಕುಟುಕು ಕಾರ್ಯಾಚರಣೆ ನಡೆಸಿ ವಿವಾದವನ್ನು ಇತ್ಯರ್ಥ ಪಡಿಸಲು ಮಧ್ಯಸ್ಥಿಕೆ ವಹಿಸುವ ಉದ್ದೇಶ ಹೊಂದಿತ್ತಾ? ಕುಟುಕು ಕಾರ್ಯಾಚರಣೆಯ ವಿಡಿಯೋ ‘ಸಿಟಿ ಟುಡೆ’ಗೆ ಲಭ್ಯವಾಗಿದ್ದು, ಸ್ಥಳೀಯ ದೃಶ್ಯಮಾಧ್ಯಮ ನಡೆಸಿದ ಕುಟುಕು ಕಾರ್ಯಾಚರಣೆಯನ್ನು ಸಿಟಿಟುಡೆ ಬಹಿರಂಗ ಪಡಿಸಿದೆ.

Leave a Reply

comments

Related Articles

error: