ಮೈಸೂರು

ಮೈಸೂರಿನಲ್ಲಿ 2017ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ದೇವನೂರು ಅಧ್ಯಕ್ಷರು…?

ಸಾಂಸ್ಕೃತಿಕ ನಗರಿ, ಜಾನಪದ ತವರು ಮೈಸೂರು 53ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಭಾಜನವಾಗಿದೆ.

ಈ ಬಗ್ಗೆ ಅಧಿಕೃತ ಪ್ರಕರಣೆಗೆ ಕ್ಷಣಗಣನೆ ಶುರುವಾಗಿದ್ದು,  ರಾಯಚೂರಿನಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ರಾತ್ರಿ ನಡೆದ ಕನ್ನಡ ಕಾರ್ಯಕಾರಿ ಸಮಿತಿ ಸಭೆಯಲ್ಲಿ 2017ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೈಸೂರಿನಲ್ಲಿ ಆಯೋಜಿಸಲು ಅನುಮೋದಿಸಲಾಯಿತು. ಸುಮಾರು 27 ವರ್ಷಗಳ ನಂತರ ಮೈಸೂರಿಗೆ ಈ ಭಾಗ್ಯ ಲಭ್ಯವಾಗಿದೆ.  ಮೈಸೂರಿಗರ ಸಂತಸಕ್ಕೆ ಪಾರವೇ ಇಲ್ಲವಾಗಿದೆ.

ಮೈಸೂರು ಕವಿ ಹಾಗೂ ಪ್ರೇಮಕವಿಯೆಂದೆ ಖ್ಯಾತರಾದ ಕೆ.ಎಸ್.ನರಸಿಂಹಸ್ವಾಮಿ ಅವರ ಅಧ‍್ಯಕ್ಷತೆಯಲ್ಲಿ 1990ರಲ್ಲಿ 60ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಸಾಂಸ್ಕೃತಿಕ ಹಾಗೂ ಅರಮನೆಗಳ ನಗರಿಯಾದ ಮೈಸೂರು ಸಾಹಿತಿಗಳ, ಕವಿಗಳ, ಕಲಾವಿದರ, ಪ್ರಗತಿಪರ ಚಿಂತಕರ ಬೀಡಾಗಿರು ಮೈಸೂರಿನಲ್ಲಿ ಮುಂದಿನ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ಹೆಸರು ಮುಂಚೂಣಿಯಲ್ಲಿದೆ.

 

Leave a Reply

comments

Related Articles

error: