ಕ್ರೀಡೆಮೈಸೂರು

ಜಿಲ್ಲಾ ಮಟ್ಟದ ಕ್ರೀಡಾ ಪಂದ್ಯಾವಳಿ : ಮರಿಮಲ್ಲಪ್ಪ ಕಾಲೇಜಿಗೆ ಪ್ರಶಸ್ತಿ

ಬೆಡನ್ ಪೊವೆಲ್ ಶಾಲಾ ಮೈದಾನದಲ್ಲಿ ವಿದ್ಯಾವರ್ಧಕ ಪದವಿಪೂರ್ವ ಕಾಲೇಜು ಏರ್ಪಡಿಸಿದ್ದ ಜಿಲ್ಲಾಮಟ್ಟದ ಹೆಚ್.ಕೆಂಪೇಗೌಡ, ಆರ್.ನಂಜಯ್ಯ ಮತ್ತು ಹೆಚ್.ಬಿ.ನರಸೇಗೌಡ ಸ್ಮರಣಾರ್ಥ ಜಿಲ್ಲಾಮಟ್ಟದ ಥ್ರೋಬಾಲ್, ವಾಲಿಬಾಲ್ ಮತ್ತು ಕಬ್ಬಡ್ಡಿ ಪಂದ್ಯಾವಳಿಗಳಲ್ಲಿ ವಿವಿಧ ಕಾಲೇಜುಗಳು ಆಕರ್ಷಕ ಪ್ರದರ್ಶನ ತೋರಿಸಿವೆ.

ಬಾಲಕರ ಕಬಡ್ಡಿ ಟೂರ್ನಿಯಲ್ಲಿ ಒಟ್ಟು 12ಕಬಡ್ಡಿ ತಂಡಗಳು ಪಾಲ್ಗೊಂಡಿದ್ದವು. ಮೊದಲನೆಯ ಸೆಮಿಫೈನಲ್ ನಲ್ಲಿ ಮರಿಮಲ್ಲಪ್ಪ ಪಿಯು ಕಾಲೇಜು ವಿವೇಕಾನಂದ ಪಿಯು ಕಾಲೇಜಿನ ವಿರುದ್ಧ 28-11 ಅಂಕಗಳಿಂದ ಮಣಿಸಿ ಫೈನಲ್ ಗೆ ತಲುಪಿತು. ಎರಡನೇ ಸೆಮಿಫೈನಲ್ ನಲ್ಲಿ ವಿದ್ಯಾವರ್ಧಕ ಪದವಿಪೂರ್ವ ಕಾಲೇಜು ಮಹಾರಾಜ ಕಾಲೇಜನ್ನು ಒಟ್ಟು 14 ಅಂಕಗಳ ಮುನ್ನಡೆಯಿಂದ ಪೈನಲ್ ಹಂತಕ್ಕೆ ತಲುಪಿತು. ನಂತರ ಪೈನಲ್ ಪಂದ್ಯಾವಳಿಯಲ್ಲಿ ಮರಿಮಲ್ಲಪ್ಪ ಪದವಿಪೂರ್ವ ಕಾಲೇಜು ವಿದ್ಯಾವರ್ಧಕ ಪದವಿಪೂರ್ವ ಕಾಲೇಜನ್ನು 24-23 ಅಂಕಗಳಿಂದ ಮಣಿಸಿ ಜಿಲ್ಲಾ ಮಟ್ಟದ ಕಬ್ಬಡ್ಡಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಬಾಲಕಿರ ಥ್ರೋಬಾಲ್ ಪಂದ್ಯಾವಳಿಯಲ್ಲಿ 9ತಂಡಗಳು ಭಾಗವಹಿಸಿದ್ದು, ಅದರಲ್ಲಿ ಮಹಾರಾಣಿ ಪದವಿಪೂರ್ವ ಕಾಲೇಜು 25-18, 25-22ಅಂಕಗಳೊಂದಿಗೆ ಜೆಎಸ್ಎಸ್ ಪದವಿಪೂರ್ವ ಕಾಲೇಜನ್ನು ಮಣಿಸಿ ಫೈನಲ್ ತಲುಪಿತು. ಟೆರೆಷಿಯನ್ ಪಿಯು ಕಾಲೇಜು 2-1ಅಂಕದೊಂದಿಗೆ ವಿಜಯ ವಿಠಲ ಪಿಯು ಕಾಲೇಜನ್ನು ಮಣಿಸಿ ಅಂತಿಮ ಘಟ್ಟ ತಲುಪಿತು. ನಂತರ ನಡೆದ ಫೈನಲ್ ಪಂದ್ಯದಲ್ಲಿ ಮಹಾರಾಣಿ ಪಿಯು ಕಾಲೇಜನ್ನು ಟೆರೆಷಿಯನ್ ಪಿಯು 2-1 ಅಂಕದೊಂದಿಗೆ ಥ್ರೋಬಾಲ್ ರೋಲಿಂಗ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಮಹಾಜನ ಪದವಿಪೂರ್ವ ಕಾಲೇಜು ವಿಜಯ ವಿಠಲಪದವಿಪೂರ್ವ ಕಾಲೇಜನ್ನು 2-0 ಅಂಕಗಳೊಂದಿಗೆ ಮಣಿಸಿತು.ಎರಡನೆಯ ಸೆಮಿಫೈನಲ್ ನಲ್ಲಿ ಜೆಎಸ್ ಎಸ್ ಪಿಯು ಕಾಲೇಜು ಶಾರದಾ ವಿಲಾಸ ಪಿಯು ಕಾಲೇಜನ್ನು 2-1 ಅಂಕಗಳೊಂದಿಗೆ ಫೈನಲ್ ಹಂತಕ್ಕೆ ತಲುಪಿತು.  ಮಹಾಜನ ಪದವಿಪೂರ್ವ ಕಾಲೇಜು ಉತ್ತಮ ಪ್ರದರ್ಶನದೊಂದಿಗೆ ಜೆ.ಎಸ್.ಎಸ್.ಪದವಿಪೂರ್ವ ಕಾಲೇಜನ್ನು 2-0 ಅಂಕಗಳೊಂದಿಗೆ ಮಣಿಸಿ ವಾಲಿಬಾಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ವಿದ್ಯಾವರ್ಧಕ ಸಂಘದ ಖಜಾಂಚಿಗಳಾದ ಎಸ್.ಎನ್.ಲಕ್ಷ್ಮೀನಾರಾಯಣ್ ಬಹುಮಾನ ವಿತರಿಸಿದರು.  ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಬ್ಬೇಗೌಡ, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: