
ಪ್ರಮುಖ ಸುದ್ದಿ
ಆನಂದ್ ಸಿಂಗ್ ಒಡೆತನದ ರೆಸಾರ್ಟ್ ಮೇಲೆ ಐಟಿ ದಾಳಿ
ರಾಜ್ಯ(ಬದಾಮಿ)ಮೇ.8:- ಆನಂದ್ ಸಿಂಗ್ ಒಡೆತನದ ರೆಸಾರ್ಟ್ ಮೇಲೆ ರಾತ್ರೋರಾತ್ರಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರೆಸಾರ್ಟ್ ನಲ್ಲಿ ಬಾದಾಮಿಯಲ್ಲಿ ಪ್ರಚಾರಕ್ಕೆ ಬಂದ ಕಾಂಗ್ರೆಸ್ ನಾಯಕರು ತಂಗಿದ್ದರು ಎನ್ನಲಾಗಿದೆ. ಕಳೆದೆರಡುದಿನಗಳ ಹಿಂದೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದೇ ರೆಸಾರ್ಟ್ ನಲ್ಲಿ ತಂಗಿದ್ದರು ಎನ್ನಲಾಗಿದೆ.
ಚುನಾವಣೆ ಇನ್ನೈದು ದಿನ ಬಾಕಿ ಇರುವಂತೆಯೇ ಕಾಂಗ್ರೆಸ್ಗೆ ಬಿಗ್ ಶಾಕ್ ನೀಡಿದ ಐಟಿ ಅಧಿಕಾರಿಗಳು ಆನಂದ್ ಸಿಂಗ್ ಒಡೆತನದ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದಾರೆ. ರೆಸಾರ್ಟ್ನಲ್ಲಿ ಸಿಎಂ ಪರಮಾಪ್ತ ಸಿಎಂ ಇಬ್ರಾಹಿಂ ಇದ್ದಾಗಲೇ ಐಟಿ ದಾಲಿ ನಡೆದಿದೆ ಎನ್ನಲಾಗಿದೆ. ಮಧ್ಯರಾತ್ರಿ 12 ಗಂಟೆ ವೇಳೆಯಲ್ಲಿ ಸುಮಾರು 10 ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದು,
ಸತತ ಏಳು ಗಂಟೆಗಳಿಂದ ಭಾರೀ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. (ಕೆ.ಎಸ್,ಎಸ್.ಎಚ್)