ಕರ್ನಾಟಕಮೈಸೂರು

ಮಾನವ ಸರಪಳಿ ರೂಪಿಸುವ ಮೂಲಕ ಮೈಸೂರು ಕನ್ನಡ ವೇದಿಕೆಯಿಂದ ಪ್ರತಿಭಟನೆ

ಕಾವೇರಿ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಕರೆ ನೀಡಿದ್ದ ಬಂದ್ ಗೆ ಪ್ರಗತಿಪರ ಕನ್ನಡ ಸಂಸ್ಥೆಗಳಿಂದ ಅಗಾಧ ಪ್ರತಿಕ್ರಿಯೆ ದೊರೆಯಿತು. ಮೈಸೂರು ರಕ್ಷಣಾ ವೇದಿಕೆಯ ಸದಸ್ಯರು ಮತ್ತು ಯುವಕರ ವೇದಿಕೆ ದೇವರಾಜ ಅರಸು ರಸ್ತೆಯಲ್ಲಿ ಮಾನವ ಸರಪಳಿ ರೂಪಿಸುವ ಮೂಲಕ ಪ್ರತಿಭಟನೆ ನಡೆಸಿದರು. ಬಾಗಿಲು ಮುಚ್ಚಿಕೊಂಡು ಕೆಲಸ ಮಾಡುತ್ತಿದ್ದ ಕೆಲವು ಕಛೇರಿಗಳನ್ನು ಕಂಡು ಮುಚ್ಚಿಸಿದರು. ಬಂದ್ ಗೆ ಬೆಂಬಲ ಕೋರಿ ಮೈಸೂರು ಟಾರ್ಪಲಿನ್ಸ್, ಕ್ರಾಫರ್ಡ್ ಹಾಲ್ ನ ಕಂಪ್ಯೂಟರ್ ಕೇಂದ್ರಗಳು ಮತ್ತು ಸೀರೆ ಅಂಗಡಿಗಳನ್ನು ಮುಚ್ಚಿಸಲಾಯಿತು. ಮಾಲೀಕರನ್ನು ಬಂದ್ ಗೆ ಸಹಕರಿಸುವಂತೆ ಪ್ರಯತ್ನಿಸಲಾಯಿತು. ಈ ಸಂದರ್ಭದಲ್ಲಿ ಮೈಸೂರು ರಕ್ಷಣಾ ವೇದಿಕೆಯ ಅಧ್ಯಕ್ಷ ಎಂ.ಕೆ. ಪ್ರೇಮ್ ಕುಮಾರ್, ಕಾರ್ಯದರ್ಶಿ ರಾಕೇಶ್ ಭಟ್, ಸಂಜಯ್, ಬಸವರಾಜು, ರಘು, ಕೆಲ್ವಿನ್, ಬೋಪಣ್ಣ ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: