ಕರ್ನಾಟಕದೇಶ

ಪುದುಚೇರಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಬರ್ಬರ ಹತ್ಯೆ

ಪುದುಚೇರಿ (ಮೇ 8): ಪುದುಚೇರಿಯ ಮಾಹೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ – ಆರೆಸ್ಸೆಸ್ ಕಾರ್ಯಕರ್ತರೊಬ್ಬರನ್ನು ಕೊಚ್ಚಿ ಕೊಂದಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಮೃತ ಆರ್ ಎಸ್ ಎಸ್ ಕಾರ್ಯಕರ್ತನನ್ನು ಶಿಮೋಜಿ ಎಂದು ಗುರುತಿಸಲಾಗಿದ್ದು, ದುಷ್ಕರ್ಮಿಗಳು ಆತನನ್ನು ಚೂಪಾದ ಆಯುಧದಿಂದ ಇರಿದು ಕೊಂದಿದ್ದಾರೆಂದು ಮೂಲಗಳು ತಿಳಿಸಿವೆ.

ಶಿಮೋಜಿ ಮುಖ ಮತ್ತು ಎದೆಯ ಭಾಗದಲ್ಲಿ ಸಾಕಷ್ಟು ಗಾಯದ ಗುರುತುಗಳಾಗಿವೆ. ಘಟನೆ ನಡೆದ ತಕ್ಷಣವೇ ಅವರನ್ನು ಹತ್ತಿರದ ಕ್ಯಾಲಿಕಟ್ ಮೆಡಿಕಲ್ ಕಾಲೇಜಿಗೆ ರವಾನಿಸಲಾಯಿತಾದರೂ ಅವರು ಮೃತರಾಗಿದ್ದಾರೆಂದು ವೈದ್ಯರು ಘೋಷಿಸಿದ್ದರು. ಇದೇ ಸಮಯದಲ್ಲಿ ಮಾಹೆಯಲ್ಲಿಯೇ ಕಮ್ಯುನಿಸ್ಟ್ ಪಕ್ಷದ (ಸಿಪಿಐ-ಎಂ) ಸ್ಥಳೀಯ ಸಮಿತಿ ಸದಸ್ಯರೊಬ್ಬರನ್ನು ಇರಿದು ಕೊಂದ ಘಟನೆಯೂ ನಡೆದಿದೆ. ಎರಡೂ ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕೊಲೆಗೆ ಕಾರಣವೂ ತಿಳಿದುಬಂದಿಲ್ಲ. (ಎನ್.ಬಿ)

Leave a Reply

comments

Related Articles

error: