ಪ್ರಮುಖ ಸುದ್ದಿ

ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಭರವಸೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ರಾಜ್ಯ(ಬೆಂಗಳೂರು)ಮೇ.8:- ಪ್ರಧಾನಿ ನರೇಂದ್ರ ಮೋದಿ ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಭರವಸೆ ನೀಡಿದ್ದಾರೆ.

ಕರ್ನಾಟಕ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ಅವರು ಕರ್ನಾಟಕದಲ್ಲಿ ಬಿಜೆಪಿ ಪರ ಸುನಾಮಿ ಏಳಲು ಯುವ ಕಾರ್ಯಕರ್ತರೇ ಕಾರಣರಾಗಿದ್ದು, ಅವರ ಪರಿಶ್ರಮ, ಹುಮ್ಮಸ್ಸು ನನ್ನನ್ನು ಮೂಕವಿಸ್ಮಿತನನ್ನಾಗಿಸಿದೆ. ಕೊಡಗು ದೇಶಕ್ಕೆ ಅತಿ ಹೆಚ್ಚು ವೀರ ಯೋಧರನ್ನು ನೀಡಿದ್ದು, ಕೊಡಗು ಜಿಲ್ಲೆಯಲ್ಲಿಯೇ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿ ಅತ್ಯುತ್ತಮ ಸೌಲಭ್ಯದೊಂದಿಗೆ ತರಬೇತಿ, ಕ್ರೀಡಾ ನಿರ್ವಹಣೆಗೆ ಸೂಕ್ತ ಸೌಲಭ್ಯ ಒದಗಿಸಲಾಗುವುದು ಎಂದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಮುಖ್ಯಮಂತ್ರಿಯ ಯುವ ನಾಯಕರ ಕಾರ್ಯಕ್ರಮವನ್ನು ಸಿಎಂಓ ಅಡಿಯಲ್ಲಿ ನಾವು ಪ್ರಾರಂಭಿಸುತ್ತಿದ್ದು, 50ಪ್ರತಿಷ್ಠಿತ ಅಭ್ಯರ್ಥಿಗಳಿಗೆ ರಾಜ್ಯದ ಆಡಳಿತದಲ್ಲಿ ಸಹಾಯ ಮಾಡಲು ಆಯ್ಕೆ ಮಾಡಲಾಗುವುದು ಎಮದರು. ಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ ಒಂದು ಕೋಟಿ ಯುವಕರಿಗೆ ಸ್ಕಿಲ್ ತರಬೇತಿ ನೀಡಲಾಗಿದ್ದು,   ಮುದ್ರಾ ಯೋಜನೆಯಡಿಯಲ್ಲಿ 5ಲಕ್ಷ ಕೋಟಿ ರೂ.ಲೋನ್ ನೀಡಲಾಗಿದೆ ಎಂದು ತಿಳಿಸಿದರು. ಇದೇ ವೇಳೆಗೆ ವಿವಿಧೆಡೆ ನಡೆದ ಕಾರ್ಯಕರ್ತರ ಹತ್ಯೆಗೆ ವಿಷಾದ ವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: