ಮೈಸೂರು

ಜಾತ್ರೆ ನಿಮಿತ್ತ ಸಂಚಾರ ಮಾರ್ಗ ಬದಲು

ಮೈಸೂರಿನ ಸಿದ್ದಲಿಂಗಪುರದ ಶ್ರೀಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದ ಷಷ್ಠಿ ಜಾತ್ರೆಯೂ ನಡೆಯಲಿದ್ದು ಇದರಂಗವಾಗ ಮೈಸೂರು-ಬೆಂಗಳೂರು ಮಾರ್ಗದಲ್ಲಿ ವಾಹನ ಸಂಚಾರವನ್ನು ಡಿ.ರ ಮಧ್ಯರಾತ್ರಿಯಿಂದ ಡಿ.5ರ ರಾತ್ರಿ 10ಗಂಟೆಯವರೆಗೆ ಬದಲಿಸಿ ಬದಲಿ ವ್ಯವಸ್ಥೆ ಮಾಡಲಾಗಿದೆ.

ದೇವಸ್ಥಾನದೆಡೆಗೆ ತೆರಳುವ ಬೆಂಗಳೂರು ಹೆದ್ದಾರಿ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ನಿರ್ಬಂಧಿಸಲಾಗಿದೆ.

ಸಂಚಾರ ವ್ಯವಸ್ಥೆ : ಮೈಸೂರಿನಿಂದ ಹೊರಡುವ ವಾಹನಗಳು ಟೋಲ್‍ಗೇಟ್ ರಿಂಗ್ ರಸ್ತೆಯ ಎಡಕ್ಕೆ ತಿರುಗಿ ರಾಯಲ್ ಇನ್ ಜಂಕ್ಷನ್ ಬಳಿ ಬಲಕ್ಕೆ ತಿರುಗಿ, ಕೆ.ಆರ್.ಎಸ್. ರಸ್ತೆಯಿಂದ  ಪಂಪ್‍ಹೌಸ್ ಬಳಿ ಬಲಕ್ಕೆ ತಿರುಗಿ, ಬೆಂಗಳೂರು ರಸ್ತೆಯನ್ನು ಸೇರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

comments

Related Articles

error: