ಮೈಸೂರು

ಚರಂಡಿಗೆ ಬಿದ್ದು ವ್ಯಕ್ತಿ ಸಾವು

ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೋರ್ವ  ಚರಂಡಿಯೊಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು  ಸ್ಥಳೀಯ ನಿವಾಸಿ ಸಿದ್ದನಾಯಕ(42) ಎಂದು ಗುರುತಿಸಲಾಗಿದೆ. ಈತ ಕುಡಿದ ನಶೆಯಲ್ಲಿ ಚರಂಡಿಗೆ ಬಿದ್ದಿದ್ದು, ಅಲ್ಲಿಯೇ ಮೃತ ಪಟ್ಟಿದ್ದಾನೆ. ಮೂಲತಃ ಹುಣಸೂರಿನ ಸ್ಟೋರ್ ಬೀದಿಯ ನಿವಾಸಿಯಾದ ಈತ, ಶನಿವಾರ ರಾತ್ರಿ ಮದ್ಯಪಾನ ಮಾಡಿ ಮನೆಗೆ ತೆರಳಿ ಊಟ ಮುಗಿಸಿದ್ದಾನೆ. ಬಳಿಕ ಚರಂಡಿ ಪಕ್ಕದಲ್ಲಿದ್ದ ಕಟ್ಟೆ ಮೇಲೆ ಕುಳಿತುಕೊಂಡಿದ್ದು,  ಆಯತಪ್ಪಿ ಚರಂಡಿಗೆ ಬಿದ್ದಿದ್ದಾನೆ. ಈ ವೇಳೆ ಉಸಿರಾಡಲು ಸಾಧ್ಯವಾಗದ ಹಿನ್ನಲೆಯಲ್ಲಿ ಚರಂಡಿಯೊಳಗೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಹುಣಸೂರಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ

Leave a Reply

comments

Related Articles

error: